ಬುಧವಾರ, ಮೇ 18, 2022
29 °C

ಈರುಳ್ಳಿ: 75 ಶೇಖರಣಾ ಸೌಲಭ್ಯಗಳಿಗಾಗಿ 40 ಸಾವಿರ ಅರ್ಜಿ ಸಲ್ಲಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಔರಂಗಾಬಾದ್‌: ‘ಮಹಾರಾಷ್ಟ್ರ ಸರ್ಕಾರವು ಈ ವರ್ಷ ಔರಂಗಾಬಾದ್‌ ಜಿಲ್ಲೆಗೆ 75 ಈರುಳ್ಳಿ ಶೇಖರಣಾ ಸೌಲಭ್ಯಗಳನ್ನು ಮಂಜೂರು ಮಾಡಿದೆ. ಆದರೆ ಈ ಸೌಲಭ್ಯ ಪಡೆಯಲು 40,000 ಕ್ಕೂ ಅರ್ಜಿಗಳು ಸಲ್ಲಿಕೆಯಾಗಿವೆ’ ಎಂದು ಅಧಿಕಾರಿಗಳು ತಿಳಿಸಿದರು.

‘ಮಹಾರಾಷ್ಟ್ರ ಸರ್ಕಾರವು ‘ಮಹಾ ಫಲೋಟ್‌ಪಾಡನ್ ವಿಕಾಸ್ ಅಭಿಯಾನ’ದಡಿ ರೈತರಿಗೆ ಶೇಖರಣಾ ಸೌಲಭ್ಯವನ್ನು ಒದಗಿಸುತ್ತದೆ. ಅರ್ಜಿ ಸಲ್ಲಿಸಿರುವ ಎಲ್ಲರಿಗೂ ಶೇಖರಣಾ ಸೌಲಭ್ಯವನ್ನು ನೀಡಬೇಕು ಎಂಬ ಬೇಡಿಕೆಯನ್ನು ಕೆಲವರು ಮುಂದಿಟ್ಟಿದ್ದಾರೆ’ ಎಂದು ಅವರು ಹೇಳಿದರು.

ಕಳೆದ ವರ್ಷ ಈರುಳ್ಳಿ ಶೇಖರಣಾ ಸೌಲಭ್ಯಗಳಿಗಾಗಿ 13,000 ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಇದರಲ್ಲಿ 1000 ಶೇಖರಣಾ ಸೌಲಭ್ಯಗಳನ್ನು ರೈತರಿಗೆ ಹಂಚಿಕೆ ಮಾಡಲಾಯಿತು.

ಈ ಋತುವಿನಲ್ಲಿ ಔರಂಗಾಬಾದ್‌ನ 20,000 ಹೆಕ್ಟರ್‌ ಭೂಮಿಯಲ್ಲಿ ಈರುಳ್ಳಿಯನ್ನು ಬೆಳೆಸಲಾಗುತ್ತಿದೆ. ಆದರೆ ಈ ವರ್ಷ ತಲಾ ₹87,500 ವೆಚ್ಚದ 75 ಶೇಖರಣಾ ಸೌಲಭ್ಯಗಳನ್ನು ಸರ್ಕಾರ ಮಂಜೂರು ಮಾಡಿದೆ. ಇದಕ್ಕಾಗಿ ನಮ್ಮ ಬಳಿ 40,623 ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಅವರು ಮಾಹಿತಿ ನೀಡಿದರು.

‘ಈರುಳ್ಳಿ ಬೆಳೆಗಾರರ ಸಂಖ್ಯೆ ಹೆಚ್ಚುತ್ತಿದೆ. ಹೀಗಿರುವಾಗ ಸರ್ಕಾರ, ಬೇಡಿಕೆಗೆ ತಕ್ಕಂತೆ ಶೇಖರಣಾ ಸೌಲಭ್ಯವನ್ನು ಒದಗಿಸಬೇಕು ಎಂದು ಮುಖ್ಯಮಂತ್ರಿ ಉದ್ಧವ್‌ ಠಾಕ್ರೆಗೆ ಪಾಲ್ಕೇಡ್‌ ಗ್ರಾಮ ಪಂಚಾಯತಿ ಮನವಿ ಸಲ್ಲಿಸಿದೆ’ ಎಂದು ಪಾಲ್ಕೇಡ್‌ ಗ್ರಾಮ ಪಂಚಾಯತಿಯ ಮಾಜಿ ಸರ್‌ಪಂಚ್‌ ನಂದ್‌ಕಿಶೋರ್‌ ಅವರು ತಿಳಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು