ಶುಕ್ರವಾರ, ಅಕ್ಟೋಬರ್ 7, 2022
23 °C

ಕೋವಿಡ್‌ ಸಂದರ್ಭ ಉದ್ಯೋಗ ಕಳೆದುಕೊಂಡ ಬಡವರ ಮಕ್ಕಳಿಗೆ ನಿವೃತ್ತ ಶಿಕ್ಷಕರಿಂದ ಪಾಠ

ಪಿಟಿಐ Updated:

ಅಕ್ಷರ ಗಾತ್ರ : | |

ಔರಂಗಬಾದ್‌: ಮಹಾರಾಷ್ಟ್ರದ ಔರಂಗಬಾದ್‌ ಜಿಲ್ಲೆಯಲ್ಲಿ ಕೋವಿಡ್‌-19 ಸಂದರ್ಭ ಉದ್ಯೋಗ ಕಳೆದುಕೊಂಡ ಬಡ ಗೋಂಡ ಬುಡಕಟ್ಟು ಸಮುದಾಯದವರ ಮಕ್ಕಳಿಗೆ ನಿವೃತ್ತ ಶಿಕ್ಷಕರು ಪಾಠ ಹೇಳಿಕೊಟ್ಟಿದ್ದಾರೆ. ಓದಲು ಮತ್ತು ಬರೆಯಲು ಕಲಿಸಿಕೊಟ್ಟಿದ್ದಾರೆ.

'ಮಗುಳ್ನಗಿಸೋಣ' ಎಂಬ ಯೋಜನೆಯಡಿ ನಿವೃತ್ತ ಶಿಕ್ಷಕರ ಗುಂಪು 50ಕ್ಕೂ ಹೆಚ್ಚು ಬಡ ಮಕ್ಕಳಿಗೆ ವಿದ್ಯೆ ಕಲಿಸಿದ್ದಾರೆ. ಈ ಯೋಜನೆಯನ್ನು ವೃತ್ತಿನಿರತ ವೈದ್ಯರು ಮತ್ತು ಶಿಕ್ಷಕರು ಆರಂಭಿಸಿದ್ದಾರೆ.

ಬುಡಕಟ್ಟು ಸಮುದಾಯಕ್ಕೆ ಸೇರಿದ ಮಕ್ಕಳು ಈಗ ಓದಲು ಮತ್ತು ಬರೆಯಲು ಕಲಿತಿದ್ದಾರೆ. ಕ್ರೀಡಾ ಚಟುವಟಿಕೆಗಳಲ್ಲೂ ಭಾಗವಹಿಸುತ್ತಿದ್ದಾರೆ. ಸ್ವಚ್ಛವಾಗಿರುವುದನ್ನು ರೂಢಿಸಿಕೊಂಡಿದ್ದಾರೆ ಎಂದು ಯೋಜನೆಯ ಸದಸ್ಯರು ಸಂತಸ ವ್ಯಕ್ತಪಡಿಸಿದ್ದಾರೆ.

ಆದಿವಾಸಿ ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಮುಖ್ಯ ವಾಹಿನಿಗೆ ಕರೆತರುವ ಪ್ರಯತ್ನವನ್ನು ಅಲ್ಲಿನ ಶಿಕ್ಷಣ ಇಲಾಖೆ ಶ್ಲಾಘಿಸಿದೆ. ಕೆಲವು ದಶಕಗಳಿಂದ ಔರಂಗಬಾದ್‌ನ ದೇವಗಿರಿ ಕೋಟೆಯ ಸಮೀಪ ಮಲಿವಾಡ ಪ್ರದೇಶದಲ್ಲಿ ಗೋಂಡ ಸಮುದಾಯ ನೆಲೆಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು