ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರದಲ್ಲಿ ಜಪ್ತಿ ಮಾಡಿದ ರೆಮ್‌ಡಿಸಿವಿರ್ ಬಳಕೆ: ಕೋರ್ಟ್ ಅನುಮತಿಗಾಗಿ ಕಾತರ

Last Updated 24 ಏಪ್ರಿಲ್ 2021, 8:46 IST
ಅಕ್ಷರ ಗಾತ್ರ

ಮುಂಬೈ: ಮಹಾರಾಷ್ಟ್ರದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವುದಿಂದ ರೆಮ್‌ಡಿಸಿವಿರ್ ಔಷಧಿಯ ಬೇಡಿಕೆಯೂ ಹೆಚ್ಚಾಗಿದ್ದು, ರಾಜ್ಯದಲ್ಲಿ ಈಗಾಗಲೇ ವಶಕ್ಕೆ ಪಡೆದಿರುವ 5,000 ರೆಮ್‌ಡಿಸಿವಿರ್ ಔಷಧಿ ಸೀಸೆಗಳನ್ನು ಬಳಸಲು ನ್ಯಾಯಾಲಯದ ಅನುಮತಿಗಾಗಿ ಕಾಯಲಾಗುತ್ತಿದೆ.

‘ಮಹಾರಾಷ್ಟ್ರದ ಹಲವು ಭಾಗಗಳಲ್ಲಿ ಈಚೆಗೆ ನಡೆಸಿದ ದಾಳಿ ವೇಳೆ ಆಹಾರ ಮತ್ತು ಔಷಧ ಆಡಳಿತ ಸಂಸ್ಥೆ (ಎಫ್‌ಡಿಎ) ಹಾಗೂ ಪೊಲೀಸ್‌ ಇಲಾಖೆ ಅಕ್ರಮವಾಗಿ ಸಂಗ್ರಹಿಸಿದ್ದ ರೆಮ್‌ಡಿಸಿವಿರ್‌ ಔಷಧಿಯನ್ನು ವಶಕ್ಕೆ ಪಡೆದಿತ್ತು’ ಎಂದು ಅಧಿಕಾರಿಗಳು ತಿಳಿಸಿದರು.

‘ದಾಳಿಯ ವೇಳೆ ಸುಮಾರು 5,000 ರೆಮ್‌ಡಿಸಿವಿರ್‌ ಔಷಧಿ ಸೀಸೆಗಳನ್ನು ವಶಕ್ಕೆ ಪಡೆಯಲಾಗಿದೆ. ಕೋರ್ಟ್‌ ಅನುಮತಿಯಿಲ್ಲದೆ ನಾವು ಈ ಔಷಧಿಗಳನ್ನು ಬಳಸಲು ಸಾಧ್ಯವಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿಗಳನ್ನು ಸಂಗ್ರಹಿಸಬೇಕು, ಆರೋಪ ಪಟ್ಟಿ ಮತ್ತು ವಶಕ್ಕೆ ಪಡೆದ ಔಷಧಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು. ಈ ಪ್ರಕರಣವನ್ನು ಗೆದ್ದ ಬಳಿಕ ಮಾತ್ರವೇ ಔಷಧಿಯನ್ನು ಕೋವಿಡ್‌ ರೋಗಿಗಳ ಬಳಕೆಗೆ ನೀಡಬಹುದು’ ಎಂದು ಎಫ್‌ಡಿಎ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

‘ಈ ರೆಮ್‌ಡಿಸಿವಿರ್‌ ಔಷಧಿಯನ್ನು ಸೋಂಕಿನ ನಿಗದಿತ ಸಮಯದಲ್ಲಿ ಮಾತ್ರ ಬಳಸಲು ಸಾಧ್ಯ. ವ್ಯಕ್ತಿಗೆ ಸೋಂಕು ತಗುಲಿದ ಆರು ದಿನಗಳೊಳಗೆ ಈ ಔಷಧಿಯನ್ನು ನೀಡಬೇಕು. ಇಲ್ಲವಾದ್ದಲ್ಲಿ ಅದು ಅಷ್ಟೊಂದು ಪರಿಣಾಮಕಾರಿಯಲ್ಲ ಎಂಬುದಾಗಿ ಆರೋಗ್ಯ ಕಾರ್ಯಕರ್ತರು ತಿಳಿಸಿದ್ದಾರೆ’ ಎಂದು ಅವರು ಹೇಳಿದರು.

ಪ್ರಧಾನಿ ಮೋದಿ ಅವರೊಂದಿಗೆ ಶುಕ್ರವಾರ ನಡೆದ ವರ್ಚುವಲ್ ಸಭೆಯಲ್ಲಿ ‘ಮಹಾರಾಷ್ಟ್ರಕ್ಕೆ ಪ್ರಕರಣಗಳಿಗೆ ಅನುಸಾರ ರೆಮ್‌ಡಿಸಿವಿರ್‌ ಔಷಧಿ ಪೂರೈಕೆ ಮಾಡಬೇಕು’ ಎಂದು ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಮನವಿ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT