ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರದ ಜೈಲಿನ ಶೌಚಾಲಯದಲ್ಲಿದ್ದ ವಸ್ತುಗಳನ್ನು ಕಂಡ ಪೊಲೀಸರಿಗೆ ಅಚ್ಚರಿ!

Last Updated 9 ಆಗಸ್ಟ್ 2021, 6:19 IST
ಅಕ್ಷರ ಗಾತ್ರ

ಥಾಣೆ: ಮಹಾರಾಷ್ಟ್ರದ ಜೈಲಿನ ಶೌಚಾಲಯದಿಂದ ಮೊಬೈಲ್ ಫೋನ್, ವಿದ್ಯುತ್ ತಂತಿ, ಸ್ಟೀಲ್ ಪಿನ್‌ಗಳು ಮತ್ತು ಇತರ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.

ಕಲ್ಯಾಣ್ ಟೌನ್‌ಶಿಪ್‌ನ ಆಧಾರ್‌ವಾಡಿ ಜೈಲಿನಲ್ಲಿ ಶುಕ್ರವಾರ ದಿಢೀರ್ ತಪಾಸಣೆ ನಡೆಸಿದ ವೇಳೆ, ಕಾರಾಗೃಹದ ಸಿಬ್ಬಂದಿಯು ಬ್ಯಾರಕ್‌ವೊಂದರ ಶೌಚಾಲಯದಲ್ಲಿನ ಎರಡು ನೀರಿನ ಡ್ರಮ್‌ಗಳ ನಡುವೆ ಉಪ್ಪಿನಕಾಯಿ ಜಾರ್‌ವೊಂದನ್ನು ಕಂಡಿದ್ದಾರೆ ಎಂದು ಅವರು ಹೇಳಿದ್ದಾರೆ.

ಆ ಜಾರ್‌ ಅನ್ನು ತೆರೆದಾಗ ಅದರಲ್ಲಿ ಮೊಬೈಲ್ ಫೋನ್, ವಿದ್ಯುತ್ ತಂತಿ, 25 ರಿಂದ 30 ಸ್ಟೀಲ್ ಪಿನ್, ಎಲೆಕ್ಟ್ರಿಕ್ ಸರ್ಕ್ಯೂಟ್ ಬೋರ್ಡ್ ಮತ್ತು ಸೀಲಾಂಟ್‌ನ ಎರಡು ಪ್ಯಾಕೆಟ್‌ಗಳು ಸಿಕ್ಕಿವೆ. ವಶಪಡಿಸಿಕೊಂಡ ವಸ್ತುಗಳ ಕುರಿತು ತಮಗೇನು ತಿಳಿದಿಲ್ಲ ಎಂದು ಕೈದಿಗಳು ತಿಳಿಸಿರುವುದಾಗಿ ಖಡಕಪದ ಪೊಲೀಸ್ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ವಸ್ತುಗಳು ಜೈಲಿನ ಬ್ಯಾರಕ್‌ಗೆ ಹೇಗೆ ತಲುಪಿದವು ಎಂಬುದನ್ನು ಕಂಡುಹಿಡಿಯಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.ಈ ಸಂಬಂಧ ಭಾರತೀಯ ದಂಡ ಸಂಹಿತೆ ಮತ್ತು ಕಾರಾಗೃಹ ಕಾಯ್ದೆಯ ಸಂಬಂಧಿತ ಪ್ರಕರಣಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT