ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸ್ ಠಾಣೆಯಲ್ಲಿ ಕೊಳೆಗೇರಿ ಮಕ್ಕಳಿಗೆ ಇಂಗ್ಲಿಷ್ ಕಲಿಕೆ

ಔರಂಗಬಾದ್‌ ನಗರದ ಠಾಣೆಯೊಂದರ ವಿಶಿಷ್ಟ ಪ್ರಯತ್ನ
Last Updated 29 ಡಿಸೆಂಬರ್ 2020, 10:44 IST
ಅಕ್ಷರ ಗಾತ್ರ

ಔರಂಗಾಬಾದ್: ಕಳ್ಳರನ್ನು ಹಿಡಿಯುವುದು, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಪೊಲೀಸರ ಕರ್ತವ್ಯ. ಆದರೆ, ಔರಂಗಬಾದ್‌ ನಗರದ ಠಾಣೆಯೊಂದರ ಪೊಲೀಸರು, ತಮ್ಮ ಕರ್ತವ್ಯದ ಜತೆಗೆ, ತಮ್ಮ ಠಾಣೆ ಸಮೀಪದಲ್ಲಿರುವ ಕೊಳೆಗೇರಿ ಮಕ್ಕಳಿಗೆ ಉಚಿತವಾಗಿ ಇಂಗ್ಲಿಷ್, ಗಣಿತ ವಿಷಗಳಿಗೆ ಟುಟೋರಿಯಲ್‌ಗಳನ್ನು ನಡೆಸುತ್ತಿದ್ದಾರೆ!

ಹೌದು, ಔರಂಗಬಾದ್‌ನ ಪುಂಡಲೀಕ ನಗರದ ಪೊಲೀಸ್ ಠಾಣೆಯ ಕಟ್ಟಡದ ತಾರಸಿಯಲ್ಲಿ, ಕಳೆದ ಮೂರು ದಿನಗಳಿಂದ ಸಮೀಪದ ಕೊಳೆಗೇರಿ ಮಕ್ಕಳಿಗೆ ಪೊಲೀಸರು ಇಂಗ್ಲಿಷ್ ಟ್ಯುಟೋರಿಯಲ್ ನಡೆಸುತ್ತಿದ್ದಾರೆ.

‘ಸಮುದಾಯ ಪೊಲೀಸ್ ಕಾರ್ಯಕ್ರಮ‘ದ ಭಾಗವಾಗಿ‌ ಹದಿನೈದು ದಿನಗಳ ಕಾಲ ಈ ತರಗತಿಗಳನ್ನು ನಡೆಸುತ್ತಾರೆ. ವಿಷಯ ಪರಿಣತ ಶಿಕ್ಷಕರ ಸಹಾಯದಿಂದ ಕೊಳೆಗೇರಿ ಮಕ್ಕಳಿಗೆ ಇಂಗ್ಲಿಷ್ ತರಗತಿಗಳನ್ನು ಆರಂಭಿಸಿದ್ದು ಹದಿನಾಲ್ಕು ಮಕ್ಕಳು ಬರುತ್ತಿದ್ದಾರೆ.

‘ಕೋವಿಡ್‌ 19‘ ಸಾಂಕ್ರಾಮಿಕದಿಂದಾಗಿ ಮಕ್ಕಳಿಗೆ ಶಾಲೆಗಳಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಆನ್‌ಲೈನ್ ತರಗತಿಗಳು ನಡೆದರೂ, ಸೌಲಭ್ಯಗಳ ಕೊರತೆಯಿಂದ ಅನೇಕ ಮಕ್ಕಳು ಆ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಇದನ್ನು ಗಮನಿಸಿ ನಾವು ಮಕ್ಕಳಿಗೆ ಉಚಿತವಾಗಿ ಇಂಗ್ಲಿಷ್ ಮತ್ತು ಗಣಿತ ತರಗತಿಗಳನ್ನು ಕಲಿಸಲು ಟ್ಯುಟೊರಿಯಲ್ ವ್ಯವಸ್ಥೆ ಮಾಡಿದ್ದೇವೆ‘ ಎಂದು ಸಹಾಯಕ ಪೊಲೀಸ್ ಇನ್‌ಸ್ಪೆಕ್ಟರ್‌ ಘನಶ್ಯಾಮ ಸೋನವಾನೆ ಹೇಳಿದರು.

ಸ್ಥಳೀಯ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಎಸ್‌.ಪಿ. ಜವಾಲ್ಕರ್‌ ಸ್ವಯಂ ಪ್ರೇರಿತರಾಗಿ ಟ್ಯುಟೊರಿಯಲ್‌ಗೆ ಬಂದು ಉಚಿತವಾಗಿ ಪಾಠ ಹೇಳಿಕೊಡುತ್ತಿದ್ದಾರೆ. ಮಾಧ್ಯಮಿಕ ಶಾಲೆಯ 14 ಮಕ್ಕಳು ಟ್ಯುಟೋರಿಯಲ್‌ಗೆ ಬರುತ್ತಿದ್ದಾರೆ. ಅದರಲ್ಲಿ ಆರು ಮಂದಿ ಲಾಕ್‌ಡೌನ್ ಅವಧಿಯಲ್ಲಿ ಆನ್‌ಲೈನ್‌ ತರಗತಿಗೂ ಹೋಗಿಲ್ಲ.

‘ಕೋವಿಡ್‌ 19‘ ಸುರಕ್ಷತಾ ಮಾರ್ಗಸೂಚಿಗಳ ಅನುಸಾರವಾಗಿ ತರಗತಿಗಳು ನಡೆಯುತ್ತಿವೆ. ಮಾಸ್ಕ್ ಧರಿಸುವುದು, ವ್ಯಕ್ತಿಗತ ಅಂತರ ಕಾಯ್ದುಕೊಳ್ಳುವುದು, ಸ್ಯಾನಿಟೈಸರ್‌ ಬಳಕೆ ಸೇರಿದಂತೆ ಎಲ್ಲ ನಿಯಮಗಳನ್ನು ಪಾಲಿಸಲಾಗುತ್ತಿದೆ. ಸದ್ಯ ಪೊಲೀಸ್ ಠಾಣೆಯ ತಾರಸಿಯಲ್ಲಿ ಪ್ರತಿ ದಿನ ಒಂದೂವರೆ ಗಂಟೆ ಕಾಲ ತರಗತಿಗಳನ್ನು ನಡೆಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT