ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರ: ಬಂಡಾಯ ಶಾಸಕನ ಕಚೇರಿ ಧ್ವಂಸಗೊಳಿಸಿದ ಶಿವಸೇನಾ ಕಾರ್ಯಕರ್ತರು

ಅಕ್ಷರ ಗಾತ್ರ

ಮುಂಬೈ: ಕುರ್ಲಾದಲ್ಲಿರುವ ಬಂಡಾಯ ಶಾಸಕ ಮಂಗೇಶ್ ಕುಡಾಲ್ಕರ್ ಅವರ ಕಚೇರಿಯನ್ನು ಶಿವಸೇನಾ ಕಾರ್ಯಕರ್ತರು ಶುಕ್ರವಾರ ಧ್ವಂಸಗೊಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದ ವಿಡಿಯೊವನ್ನು ಟ್ವೀಟ್‌ ಮಾಡಿರುವ ಸುದ್ದಿಸಂಸ್ಥೆ ‘ಎಎನ್‌ಐ’, ‘ಮುಂಬೈನ ಕುರ್ಲಾದಲ್ಲಿರುವ ಬಂಡಾಯ ಶಾಸಕ ಮಂಗೇಶ್‌ ಕುಡಾಲ್ಕರ್‌ ಅವರ ಕಚೇರಿಯನ್ನು ಶಿವಸೇನಾ ಬೆಂಬಲಿಗರು ಇಂದು ಧ್ವಂಸಗೊಳಿಸಿದ್ದಾರೆ’ ಎಂದು ತಿಳಿಸಿದೆ.

ಮಹಾ ವಿಕಾಸ್ ಅಘಾಡಿ ನೇತೃತ್ವದ ಸರ್ಕಾರದ ವಿರುದ್ಧ ಬಂಡೆದ್ದಿರುವ ಸಚಿವ ಏಕನಾಥ್ ಶಿಂಧೆ ಸುಮಾರು 40 ಶಾಸಕರ ಜೊತೆ ಗುವಾಹಟಿಯಲ್ಲಿ ಬೀಡು ಬಿಟ್ಟಿದ್ದಾರೆ.

ಶಿವಸೇನಾದ 40ಕ್ಕೂ ಹೆಚ್ಚು ಶಾಸಕರು ಹಾಗೂ 12 ಪಕ್ಷೇತರರ ಬೆಂಬಲ ಇರುವುದಾಗಿ ಶಿಂಧೆ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT