ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂಪಾರಣ್ಯ ಸತ್ಯಾಗ್ರಹ ನಡೆದ ಸ್ಥಳದ ಬಳಿಯಿದ್ದ ಗಾಂಧಿ ಪ್ರತಿಮೆ ಧ್ವಂಸ

Last Updated 15 ಫೆಬ್ರುವರಿ 2022, 10:38 IST
ಅಕ್ಷರ ಗಾತ್ರ

ಮೋತಿಹಾರಿ(ಬಿಹಾರ):ಪಾರ್ಕ್‌ ಒಂದರಲ್ಲಿದ್ದ ಮಹಾತ್ಮಾ ಗಾಂಧಿ ಪ್ರತಿಮೆಯನ್ನುಕಿಡಿಗೇಡಿಗಳು ಸಂಪೂರ್ಣವಾಗಿ ಧ್ವಂಸಗೊಳಿಸಿರುವ ಘಟನೆ ಬಿಹಾರದ ಮೋತಿಹಾರಿ ಎಂಬಲ್ಲಿ ಮಂಗಳವಾರ ನಡೆದಿದೆ.

ಪ್ರತಿಮೆ ಧ್ವಂಸಗೊಂಡ ಸ್ಥಳ ಮಹಾತ್ಮಾ ಗಾಂಧಿ ಅವರು ಬ್ರಿಟೀಷರ ವಿರುದ್ಧ ಚಂಪಾರಣ್ಯ ಸತ್ಯಾಗ್ರಹ ನಡೆಸಿದ್ದ ಸ್ಥಳದಿಂದ ಅನತಿ ದೂರದಲ್ಲಿದೆ.

‘ಘಟನೆ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಮೋತಿಹಾರಿ ಪ್ರದೇಶದ ಚರಕ ಪಾರ್ಕ್‌ನಲ್ಲಿದ್ದ ಗಾಂಧಿ ಪ್ರತಿಮೆಯನ್ನು ಕಿಡಗೇಡಿಗಳು ಧ್ವಂಸಗೊಳಿಸಿ ನೆಲದ ಮೇಲೆ ಎಸೆದುಹೋಗಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಕಿಡಿಗೇಡಿಗಳ ಬಂಧನಕ್ಕೆ ಕ್ರಮ ವಹಿಸಲಾಗಿದೆ’ ಎಂದು ಚಂಪಾರಣ್ಯ ಜಿಲ್ಲಾಧಿಕಾರಿ ಶೀರ್ಷತ್ ಕಪಿಲ್ ಅಶೋಕ್ ಅವರು ತಿಳಿಸಿದ್ದಾರೆ.

ಘಟನೆಯ ಹಿಂದಿನ ದಿನ ಕೆಲ ಬಲಪಂಥೀಯ ಸಂಘಟನೆಗಳು ಸ್ಥಳದಲ್ಲಿ ಧಾರ್ಮಿಕ ಘೋಷಣೆಗಳನ್ನು ಕೂಗಿದ್ದವು ಎನ್ನಲಾಗಿದೆ.

1917 ರಲ್ಲಿ ಮಹಾತ್ಮಾ ಗಾಂಧಿ ಮೊದಲ ಬಾರಿಗೆ ಸತ್ಯಾಗ್ರಹವನ್ನು ಬಿಹಾರ್‌ದ ಚಂಪಾರಣ್ಯದಲ್ಲಿ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT