ಶುಕ್ರವಾರ, ನವೆಂಬರ್ 27, 2020
19 °C

ನಟಿ ಲುವಿಯೆನ್ನಾ ಲೋಧ್‌‌ ವಿರುದ್ಧ ಭಟ್ ಸಹೋದರರಿಂದ ಮಾನನಷ್ಟ ಮೊಕದ್ದಮೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಆಧಾರರಹಿತ ಮತ್ತು ಮಾನಹಾನಿಕಾರಕ ಆರೋಪ ಎಸಗಿದ್ದಾರೆ ಎಂದು ನಟಿ ಲುವಿಯೆನ್ನಾ ಲೋಧ್ ವಿರುದ್ಧ ಚಿತ್ರ ನಿರ್ಮಾಪಕ ಮಹೇಶ್‌ ಭಟ್ ಮತ್ತು ಅವರ ಸಹೋದರ ಮುಖೇಶ್ ಭಟ್ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

ಭಟ್ ಸಹೋದರರು ಲೋಧ್ ಅವರಿಂದ ಒಂದು ಕೋಟಿ ರೂಪಾಯಿ ನಷ್ಟ ಪರಿಹಾರ ಕೋರಿದ್ದಾರೆ. ಭವಿಷ್ಯದಲ್ಲಿ ಇಂಥ ಯಾವುದೇ ಹೇಳಿಕೆಯನ್ನು ನೀಡದಂತೆ ಅವರ ಮೇಲೆ ನಿರ್ಬಂಧ ಹೇರಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.

ತುರ್ತು ಪ್ರಕರಣವಾಗಿ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಂಡ ನ್ಯಾಯಮೂರ್ತಿ ಎ.ಕೆ.ಮೆನನ್ ಅವರಿದ್ದ ಏಕ ಸದಸ್ಯ ಪೀಠವು, ಪ್ರತಿಕ್ರಿಯೆ ದಾಖಲಿಸುವಂತೆ ಲೋಧ್ ಅವರಿಗೆ ನಿರ್ದೇಶಿಸಿದ್ದು, ವಿಚಾರಣೆಯನ್ನು ಮೂರು ವಾರಗಳ ಅವಧಿಗೆ ಮುಂದೂಡಿತು.

ಅರ್ಜಿದಾರ ವಿರುದ್ಧ ಲೋಧ್ ಇಂಥ್ ಯಾವುದೇ ಹೇಳಿಕೆ ನೀಡುವುದಿಲ್ಲ ಎಂದು ಅವರ ಪರವಾಗಿ ಹಾಜರಿದ್ದ ವಕೀಲರು ಕೋರ್ಟ್‌ಗೆ ಭರವಸೆ ನೀಡಿದರು. ಕಳೆದ ವಾರ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಅಪ್‌ಲೋಡ್ ಮಾಡಿದ್ದ ಲೋಧ್‌, ಮಹೇಶ್‌ ಭಟ್‌ ಸಂಬಂಧಿಯಾದ ಸುಮಿತ್ ಸಭರವಾಲ್ ಅವರನ್ನು ತಾನು ವಿವಾಹವಾಗಿದ್ದು, ಅವರು ಡ್ರಗ್ಸ್ ಪೂರೈಸುತ್ತಾರೆ ಎಂದು ಹೇಳಿಕೊಂಡಿದ್ದರು. ಮಹೇಶ್ ಭಟ್ ಈ ವ್ಯವಹಾರವನ್ನು ನಿರ್ವಹಣೆ ಮಾಡುತ್ತಾರೆ ಎಂದೂ ಆರೋಪಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು