ಮಂಗಳವಾರ, ಮೇ 17, 2022
26 °C

ಪುದುಚೇರಿ: ಮೋದಿಯ ಕೊಲ್ಲುವುದಾಗಿ ಫೇಸ್‌ಬುಕ್‌ ಪೋಸ್ಟ್‌ ಮಾಡಿದ್ದ ವ್ಯಕ್ತಿಯ ಬಂಧನ

ಪಿಟಿಐ Updated:

ಅಕ್ಷರ ಗಾತ್ರ : | |

narendra modi

ಪುದುಚೇರಿ: ಯಾರಾದರೂ ಐದು ಕೋಟಿ ರೂಪಾಯಿ ಕೊಟ್ಟರೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಕೊಲ್ಲುವುದಾಗಿ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಬಂಧಿತನನ್ನು ನೆರೆಯ ಆರ್ಯನ್‌ಕುಪ್ಪಂ ಹಳ್ಳಿಯ ನಿವಾಸಿ ಸತ್ಯಾನಂದನಂ(43) ಎಂದು ಗುರುತಿಸಲಾಗಿದೆ. ಈತ ಒಬ್ಬ ರಿಯಲ್‌ ಎಸ್ಟೇಟ್‌ ಉದ್ಯಮಿ ಎಂದು ತಿಳಿದುಬಂದಿದೆ. ಬಂಧಿತನನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಧೀಶರು ಈತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.

ಓದಿ: 

ಸಾರ್ವಜನಿಕರಿಗೆ ಮೋಸ ಮಾಡುವುದು, ದ್ವೇಷಭಾಷಣ ಅಥವಾ ಪ್ರಚೋದಿತ ಹೇಳಿಕೆಗಳನ್ನು ನೀಡಿದ ಆರೋಪಗಳ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

‘ಯಾರಾದರೂ ಐದು ಕೋಟಿ ರೂಪಾಯಿ ಕೊಟ್ಟರೆ,  ಪ್ರಧಾನಿಯವರನ್ನು ಕೊಲ್ಲಲು ಸಿದ್ಧ‘ ಎಂಬ ಮಾಹಿತಿಯನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದ. ಕಾರು ಚಾಲಕನೊಬ್ಬ ಗುರುವಾರ ಈ ಸಂದೇಶವನ್ನು ಗಮನಿಸಿ ಪೊಲೀಸರಿಗೆ ತಿಳಿಸಿದ್ದರು. ಪೊಲೀಸರು  ಫೇಸ್‌ಬುಕ್ ಖಾತೆಯನ್ನು ಪತ್ತೆಹಚ್ಚಿ, ಈತನನ್ನು ಬಂಧಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು