ಶನಿವಾರ, ಸೆಪ್ಟೆಂಬರ್ 18, 2021
21 °C

ರಾಜಸ್ಥಾನ: ಬೇಹುಗಾರಿಕೆ ಆರೋಪದಡಿ ವ್ಯಕ್ತಿ ಬಂಧನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಜೈಸಲ್ಮೇರ್‌: ‘ರಾಜಸ್ಥಾನದ ಜೈಸಲ್ಮೇರ್‌ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬನನ್ನು ಬೇಹುಗಾರಿಕೆ ನಡೆಸಿದ ಆರೋಪದಡಿ ಭಾರತೀಯ ಸೇನೆಯ ಗುಪ್ತಚರ ಇಲಾಖೆಯು ಬಂಧಿಸಿದೆ’ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದರು.

‘ಶಂಕಿತನನ್ನು ಬಸನ್‌ಪೀರ್ ನಿವಾಸಿ ಭಾಯಿ ಖಾನ್‌ ಎಂದು ಗುರುತಿಸಲಾಗಿದೆ. ಈತನ ಚಟುವಟಿಕೆ ಮೇಲೆ ಹಲವು ದಿನಗಳಿಂದ ಗುಪ್ತಚರ ಇಲಾಖೆಯು ನಿಗಾ ಇರಿಸಿತ್ತು. ಶನಿವಾರ ರಾತ್ರಿ ಟಿಎಸ್‌ಪಿ ಗೇಟ್‌ ಬಳಿ ಆರೋಪಿಯನ್ನು ಸೇನೆಯು ಬಂಧಿಸಿದೆ’ ಎಂದು ಅವರು ಹೇಳಿದರು.

‘ಶಂಕಿತ ವ್ಯಕ್ತಿ ಕ್ಯಾಂಟೀನ್‌ ನಡೆಸುತ್ತಿದ್ದರಿಂದ ಆತ ಸುಲಭವಾಗಿ ಸೇನಾ ಪ್ರದೇಶಕ್ಕೆ ಹೋಗಿ, ಬರುತ್ತಿದ್ದ. ಶ್ರೀಲಂಕಾ, ಪಾಕಿಸ್ತಾನ, ಲಂಡನ್ ಮತ್ತು ಆಸ್ಟ್ರೇಲಿಯಾದ ಹಲವಾರು ಅನುಮಾನಾಸ್ಪದ ದೂರವಾಣಿ ಸಂಖ್ಯೆಗಳು ಆತನ ಮೊಬೈಲ್ ಫೋನ್‌ನಲ್ಲಿ ಪತ್ತೆಯಾಗಿವೆ’ ಎಂದು ಅವರು ಮಾಹಿತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು