ಮಂಗಳವಾರ, ಮಾರ್ಚ್ 28, 2023
23 °C

ಬ್ಲೂಟೂತ್‌ ಹೆಡ್‌ಫೋನ್‌ ಸ್ಪೋಟ; ಯುವಕ ಸಾವು!

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಜೈಪುರ: ಬ್ಲೂಟೂತ್‌ ಹೆಡ್‌ಫೋನ್‌ ಸ್ಪೋಟಗೊಂಡ ಪರಿಣಾಮ 28 ವರ್ಷದ ಯುವಕನೊಬ್ಬ ಮೃತಪಟ್ಟಿರುವ ಘಟನೆ ಇಲ್ಲಿನ ಉದಯಪುರಿಯ ಗ್ರಾಮದಲ್ಲಿ ನಡೆದಿದೆ.

ಶುಕ್ರವಾರ ರಾಕೇಶ್ ಕುಮಾರ್ ನಗರ ಎಂಬಾತ ತನ್ನ ನಿವಾಸದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದರು.

‘ರಾಕೇಶ್‌ ಕುಮಾರ್‌ ಹೆಡ್‌ಫೋನ್‌ ಚಾರ್ಜ್‌ಗಿಟ್ಟು ಅದನ್ನು ಬಳಕೆ ಮಾಡುತ್ತಿದ್ದಾಗ ಹೆಡ್‌ಫೋನ್‌ ಸ್ಪೋಟಗೊಂಡಿದೆ. ಈ ವೇಳೆ ಪ್ರಜ್ಞೆ ತಪ್ಪಿದ್ದ ರಾಕೇಶ್‌ ಅವರನ್ನು ಸಿದ್ಧಿ ವಿನಾಯಕ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ರಾಕೇಶ್‌ ಮೃತಪಟ್ಟಿದ್ದಾರೆ. ಸ್ಫೋಟದಿಂದಾಗಿ ಅವರ ಕಿವಿಗೆ ಗಂಭೀರ ಗಾಯಗಳಾಗಿತ್ತು’ ಎಂದು ಅವರು ಮಾಹಿತಿ ನೀಡಿದರು.

‘ರಾಕೇಶ್‌ ಬಹುಶಃ ಹೃದಯಾಘಾತದಿಂದ ಸಾವಿಗೀಡಾಗಿರಬಹುದು’ ಎಂದು ಡಾ. ಎಲ್‌.ಎನ್‌. ರುಂದ್ಲಾ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು