ಆಸ್ತಿಯ ಸಮಪಾಲನ್ನು ಪತ್ನಿ ಹಾಗೂ ಸಾಕುನಾಯಿಗೆ ಬರೆದಿಟ್ಟ ವ್ಯಕ್ತಿ

ಭೋಪಾಲ: ಮಧ್ಯಪ್ರದೇಶ ಮೂಲದ ವ್ಯಕ್ತಿಯೊಬ್ಬರು ಸ್ವ ಇಚ್ಛೆಯಂತೆ ಆಸ್ತಿಯ ಸಮಪಾಲನ್ನು ಪತ್ನಿ ಹಾಗೂ ಸಾಕುನಾಯಿಗೆ ಉಯಿಲು ಬರೆದಿಡುವ ಮೂಲಕ ಗಮನ ಸೆಳೆದಿದ್ದಾರೆ.
ಮಧ್ಯ ಪ್ರದೇಶ ಚಿಂದ್ವಾರ ಚಿಲ್ಲೆಯ 50 ವರ್ಷದ ಓಂ ನಾರಾಯಣ್ ವರ್ಮಾ ಎಂಬವರೇ ತಮ್ಮ ಆಸ್ತಿಯ ಅರ್ಧ ಪಾಲನ್ನು ಸಾಕುನಾಯಿಯ ಹೆಸರಿನಲ್ಲಿ ಬರೆದಿಟ್ಟಿದ್ದಾರೆ.
ಬಡಿಬಾಬಾ ಗ್ರಾಮ ನಿವಾಸಿಯಾಗಿರುವ ಅವರಿಗೆ ನಾಲ್ಕು ಹೆಣ್ಮಕ್ಕಳು ಹಾಗೂ ಒಬ್ಬ ಮಗ ಇದ್ದಾರೆ. ಆದರೆ ತಮ್ಮ ಮಕ್ಕಳ ಹೆಸರಿನಲ್ಲಿ ಆಸ್ತಿ ಹಂಚುವ ಮನಸ್ಸು ಮಾಡಲಿಲ್ಲ.
ಉಯಿಲುನಲ್ಲಿ ಬರೆದಿಟ್ಟಿರುವ ದಾಖಲಾತಿಯ ಪ್ರಕಾರ, ಓಂ ನಾರಾಯಣ್ ವರ್ಮಾ 18 ಎಕರೆ ಜಮೀನನ್ನು ಹೊಂದಿದ್ದಾರೆ. ಅಲ್ಲದೆ ಪತ್ನಿ ಹಾಗೂ ಸಾಕುನಾಯಿಗೆ ಸಮಪಾಲು ಹಂಚಿದ್ದಾರೆ.
ಇದನ್ನೂ ಓದಿ: ಕೇರಳ: ಗ್ರಾಮ ಪಂಚಾಯಿತಿ ಕಸ ಗುಡಿಸುತ್ತಿದ್ದ ಆನಂದವಲ್ಲಿ ಈಗ ಅಲ್ಲೇ ಅಧ್ಯಕ್ಷೆ!
ಇಲ್ಲಿ ಆಸಕ್ತಿದಾಯಕ ಸಂಗತಿಯೆಂದರೆ ಶ್ವಾನದ ಮರಣದ ನಂತರ, ಈ ಸಾಕುಪ್ರಾಣಿಯನ್ನು ನೋಡಿಕೊಂಡವರಿಗೆ ಆಸ್ತಿಯ ಪಾಲು ಸೇರುತ್ತದೆ.
ನನ್ನ ಮಕ್ಕಳ ಮೇಲೆ ನನಗೆ ನಂಬಿಕೆಯಿಲ್ಲ, ಹಾಗಾಗಿ ನನ್ನ ಮರಣಾಂತರ ನನ್ನ ಪತ್ನಿ ಹಾಗೂ ಸಾಕುನಾಯಿ ಆಸ್ತಿಯ ಹಕ್ಕುದಾರರು ಎಂದು ಉಯಿಲು ಬರೆದಿಟ್ಟಿದ್ದೇನೆ ಎಂದು ಗ್ರಾಮದ ಮಾಜಿ ಸರಪಂಚ ಕೂಡಾ ಆಗಿರುವ ಓಂ ನಾರಾಯಣ್ ವರ್ಮಾ ತಿಳಿಸಿದರು.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.