ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಣಿಪುರ ವಿಧಾನಸಭೆಗೆ ಆರಿಸಿ ಬಂದ ಅಧಿಕ ಸಂಖ್ಯೆಯ ಮಹಿಳೆಯರು: ಹೊಸ ದಾಖಲೆ

Last Updated 11 ಮಾರ್ಚ್ 2022, 9:13 IST
ಅಕ್ಷರ ಗಾತ್ರ

ಇಂಫಾಲ್: 60 ಸದಸ್ಯ ಬಲದ ಮಣಿಪುರ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಐವರು ಮಹಿಳೆಯರು ಆರಿಸಿ ಬಂದಿದ್ದು, ರಾಜ್ಯದ ಚುನಾವಣಾ ಇತಿಹಾಸದಲ್ಲೇ ಹೊಸ ದಾಖಲೆಯಾಗಿದೆ.

ಬಿಜೆಪಿಯ ಎಸ್ಎಸ್ ಒಲಿಶ್ (ಚಾಂಡೆಲ್), ಮಾಜಿ ಸಚಿವೆ ನೆಮ್ಚಾ ಕಿಪ್ಗೆನ್ (ಕಾಂಗ್ಪೋಕ್ಪಿ), ಸಗೊಲ್ಶೆಮ್ ಕೆಬಿ ದೇವಿ (ನವೋರಿಯಾ ಪಖಾಂಗ್ಲಾಕ್ಪಾ) ಮತ್ತು ನ್ಯಾಷನಲ್ ಪೀಪಲ್ಸ್ ಪಾರ್ಟಿಯ ಇರೆಂಗ್ಬಾಮ್ ನಳಿನಿ ದೇವಿ (ಒಯಿನಾಮ್ ಕ್ಷೇತ್ರ), ಪುಖ್ರಂಬಮ್ ಸುಮತಿ ದೇವಿ ಅವರು ಪುರುಷ ಪ್ರತಿಸ್ಪರ್ಧಿಗಳನ್ನು ಸೋಲಿಸಿದ್ದಾರೆ.

ಯೈಸ್ಕುಲ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಫೈರ್ ಬ್ರಾಂಡ್ ಮಹಿಳಾ ನಾಯಕಿ ಮತ್ತು ಜೆಡಿಯು ಅಭ್ಯರ್ಥಿ ತೌನೊಜಮ್ ಬೃಂದಾ ಅವರು ಕೇವಲ 4,574 ಮತಗಳನ್ನು (ಶೇ 18.93) ಪಡೆದು ಮೂರನೇ ಸ್ತಾನಕ್ಕೆ ತೃಪ್ತಿಪಟ್ಟುಕೊಂಡರು.

ಒಟ್ಟಾರೆಯಾಗಿ, 17 ಮಹಿಳಾ ಅಭ್ಯರ್ಥಿಗಳುಅಥವಾ ಒಟ್ಟು 265 ಸ್ಪರ್ಧಿಗಳ ಪೈಕಿ ಶೇಕಡ 6.42 ರಷ್ಟು ಮಹಿಳೆಯರು ವಿವಿಧ ಪಕ್ಷಗಳಿಂದ ಕಣದಲ್ಲಿದ್ದರು.

2017ರ ವಿಧಾನಸಭಾ ಚುನಾವಣೆಯಲ್ಲಿ 11 ಮಹಿಳಾ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಆದರೆ ಇಬ್ಬರು ಮಾತ್ರ ಗೆಲುವು ಸಾಧಿಸಿದ್ದರು, 2012ರ ಚುನಾವಣೆಯಲ್ಲಿ ಮೂವರು ಗೆದ್ದಿದ್ದರು. 2017ರಲ್ಲಿ,ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯಿದೆಯ ವಿರುದ್ಧ 16 ವರ್ಷಗಳ ಉಪವಾಸವನ್ನು ಅಂತ್ಯಗೊಳಿಸಿದ ಬಳಿಕ ಹೋರಾಟಗಾರ್ತಿ ಇರೋಮ್ ಶರ್ಮಿಳಾ ಚಾನು ಅವರು ಪೀಪಲ್ಸ್ ರಿಸರ್ಜೆನ್ಸ್ ಮತ್ತು ಜಸ್ಟೀಸ್ ಅಲಯನ್ಸ್ ಪಕ್ಷದಿಂದ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಆದರೆ, ಅವರಿಗೆ ಜಯ ದಕ್ಕಿರಲಿಲ್ಲ.

1990ರಲ್ಲಿ ಮಣಿಪುರದ ಮೊದಲ ಮಹಿಳಾ ಶಾಸಕಿಯಾಗಿ ಹಂಗ್ಮಿಲಾ ಶೈಜಾ (ಮಣಿಪುರದ ನಾಲ್ಕನೇ ಮುಖ್ಯಮಂತ್ರಿ ಯಂಗ್ಮಾಶೋ ಶೈಜಾ ಅವರ ಪತ್ನಿ) ಉಖ್ರುಲ್ ಕ್ಷೇತ್ರದಿಂದ ಆಯ್ಕೆಯಾಗಿದ್ದರು.

ರಾಜಕಾರಣಿಗಳು ಮಹಿಳೆಯರ ಪ್ರಾತಿನಿಧ್ಯದ ಬಗ್ಗೆ ಉದ್ದುದ್ಧ ಭಾಷಣ ಮಾಡುತ್ತಾರೆ. ಚುನಾವಣೆ ಸಂದರ್ಭದಲ್ಲಿ ಅವರಿಗೆ ಆದ್ಯತೆ ಕೊಡುವುದಿಲ್ಲ ಎಂದು ವಿಶ್ಲೇಷಕರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT