ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಯಾ: ಒಂದೇ ಕುಟುಂಬದ ನಾಲ್ವರ ಹತ್ಯೆಗೈದು, ಕೊಟ್ಟಿಗೆಯಲ್ಲಿ ಶವ ತೂಗುಹಾಕಿದ ನಕ್ಸಲರು

Last Updated 15 ನವೆಂಬರ್ 2021, 6:51 IST
ಅಕ್ಷರ ಗಾತ್ರ

ಗಯಾ (ಬಿಹಾರ): ಇಬ್ಬರು ಮಹಿಳೆಯರು ಸೇರಿದಂತೆ ಒಂದೇ ಕುಟುಂಬದ ನಾಲ್ವರನ್ನು ಮಾವೋವಾದಿಗಳು ಹತ್ಯೆ ಮಾಡಿದ್ದಾರೆ. ಗಯಾದ ಹಳ್ಳಿಯೊಂದರಲ್ಲಿ ನಕ್ಸಲರು ಮನೆಯ ಅಂಗಳದಲ್ಲಿನ ದನದ ಕೊಟ್ಟಿಗೆಯಲ್ಲಿ ನಾಲ್ಕು ಜನರನ್ನು ನೇತು ಹಾಕಿದ್ದು, ಮನೆಯನ್ನು ಸ್ಫೋಟಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

ಪೊಲೀಸ್‌ ಇಲಾಖೆಯ ಎಡಿಜಿ ಪ್ರಕಾರ, ಡುಮರಿಯಾ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಬಿಹಾರ–ಜಾರ್ಖಂಡ್‌ ವಲಯದ ಸಮೀಪದಲ್ಲಿರುವ ಸರಯೂ ಸಿಂಗ್‌ ಭೋಕ್ತಾ ಮನೆಯ ಮೇಲೆ ನಿಷೇಧಿತ ಸಿಪಿಐ(ಮಾವೋವಾದಿ)ನ ಸದಸ್ಯರು ಶನಿವಾರ ರಾತ್ರಿ ದಾಳಿ ನಡೆಸಿದ್ದರು.

ಮಾವೋವಾದಿಗಳು ಭೋಕ್ತಾ ಅವರ ಮನೆಯಲ್ಲಿ ಕರಪತ್ರ ಬಿಟ್ಟು ಹೋಗಿದ್ದು, ಭೋಕ್ತಾ ಮತ್ತು ಅವರ ಕುಟುಂಬವನ್ನು ಪೊಲೀಸ್‌ ಮಾಹಿತಿದಾರರು ಎಂದು ಆರೋಪಿಸಿದ್ದಾರೆ. ಅವರು ಕೊಟ್ಟಿರುವ ಸುಳಿವಿನಿಂದಲೇ ಈ ವರ್ಷ ಮಾರ್ಚ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ನಾಲ್ವರು ನಕ್ಸಲರು ಹತರಾಗಿರುವ ಬಗ್ಗೆ ಉಲ್ಲೇಖಿಸಿದ್ದಾರೆ. ಸ್ಥಳೀಯ ಪೊಲೀಸರು ಮತ್ತು ಕೋಬ್ರಾ ಬೆಟಾಲಿಯನ್‌ ಮಾರ್ಚ್‌ನಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳು ಹಾಗೂ ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದರು.

ನಕ್ಸಲರು ದಾಳಿ ನಡೆಸಿದಾಗ ಭೋಕ್ತಾ ಮನೆಯಲ್ಲಿ ಇರಲಿಲ್ಲ. ಭೋಕ್ತಾ ಅವರ ಇಬ್ಬರು ಗಂಡು ಮಕ್ಕಳು ಹಾಗೂ ಅವರ ಹೆಂಡತಿಯರನ್ನು ಹತ್ಯೆ ಮಾಡಿ, ದನದ ಕೊಟ್ಟಿಗೆಯಲ್ಲಿ ಬಿದಿರು ಬೊಂಬುಗಳಿಗೆ ತೂಗಿ ಹಾಕಿದ್ದರು. ಹಾಗೇ ಮನೆಯೊಳಗೆ ಬಾಂಬ್‌ಗಳನ್ನು ಇಟ್ಟು ಸಿಡಿಸಲಾಗಿದೆ.

ಗಯಾದ ಎಸ್‌ಎಸ್‌ಪಿ ಆದಿತ್ಯ ಕುಮಾರ್‌ ಘಟನೆಯ ಸ್ಥಳದಲ್ಲಿ ಠಿಕಾಣಿ ಹೂಡಿದ್ದು, ಶೋಧ ಕಾರ್ಯದ ಮೇಲ್ವಿಚಾರಣೆ ಕೈಗೊಂಡಿದ್ದಾರೆ. ನವೆಂಬರ್‌ 24ರಂದು ಪಂಚಾಯಿತಿ ಚುನಾವಣೆಗಳು ನಿಗದಿಯಾಗಿರುವ ಹಿನ್ನೆಲೆಯಲ್ಲಿ ನಕ್ಸಲರ ದಾಳಿ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT