ಮಂಗಳವಾರ, ಸೆಪ್ಟೆಂಬರ್ 21, 2021
27 °C
ಕೇರಳ ಹೈಕೋರ್ಟ್‌ ಅಭಿಪ್ರಾಯ

ಪತ್ನಿ ಇಚ್ಛೆ ವಿರುದ್ಧ ಲೈಂಗಿಕ ಕ್ರಿಯೆ ನಡೆಸಿದರೆ ವೈವಾಹಿಕ ಅತ್ಯಾಚಾರ: ಹೈಕೋರ್ಟ್

ಪಿಟಿಐ Updated:

ಅಕ್ಷರ ಗಾತ್ರ : | |

ಕೊಚ್ಚಿ: ‘ಪತ್ನಿಯ ದೇಹ ಪತಿಗಾಗಿಯೇ ಮೀಸಲಾಗಿದೆ ಎಂದು ಭಾವಿಸಿಕೊಂಡು, ಆಕೆಯ ಇಚ್ಛೆಯ ವಿರುದ್ಧ ಲೈಂಗಿಕ ಕ್ರಿಯೆ ನಡೆಸುವುದು ವೈವಾಹಿಕ ಅತ್ಯಾಚಾರ’ ಎಂದು ಕೇರಳ ಹೈಕೋರ್ಟ್‌ ಹೇಳಿದೆ.

‘ವಿವಾಹ ಮತ್ತು ವಿಚ್ಛೇದನವು ಜಾತ್ಯತೀತ ಕಾನೂನು ವ್ಯಾಪ್ತಿಯಲ್ಲೇ ಇರಬೇಕು’ ಎಂದು ನ್ಯಾಯಮೂರ್ತಿಗಳಾದ ಎ. ಮುಹಮ್ಮದ್‌ ಮುಸ್ತಾಖ್‌ ಮತ್ತು  ಕೌಸರ್‌ ಎಡಪ್ಪಗಾಥ್‌ ಅವರನ್ನೊಳಗೊಂಡ ಪೀಠವು ಅಭಿಪ್ರಾಯಪಟ್ಟಿದೆ.

‘ವಿವಾಹದ ಸಂದರ್ಭದಲ್ಲಿ ಪತಿ ಮತ್ತು ಪತ್ನಿ ಇಬ್ಬರೂ ಸಮಾನರು ಎಂದು ಪರಿಗಣಿಸಲಾಗುತ್ತದೆ. ಪತ್ನಿಗಿಂತ ತಾನು ಹೆಚ್ಚು ಶ್ರೇಷ್ಠ ಎಂದು ಪತಿ ಭಾವಿಸಿಕೊಳ್ಳಬಾರದು. ಇದು ಆಕೆಯ ದೇಹವಾಗಿರಬಹುದು ಅಥವಾ ವೈಯಕ್ತಿಕ ಸ್ಥಾನಮಾನಕ್ಕೆ ಸಂಬಂಧಪಟ್ಟದ್ದಾಗಿರಬಹುದು’ ಎಂದು ಪೀಠವು ಹೇಳಿದೆ.

ವಿಚ್ಛೇದನ ನೀಡಿದ ಕೌಟುಂಬಿಕ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಎರಡು ಅರ್ಜಿಗಳನ್ನು ತಿರಸ್ಕರಿಸಿದ ನ್ಯಾಯಾಲಯ, ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ.

‘ವೈವಾಹಿಕ ಅತ್ಯಾಚಾರವು ವಿಚ್ಛೇದನ ಪಡೆದುಕೊಳ್ಳಲು ಪ್ರಮುಖ ಅಂಶವಾಗಿದೆ’ ಎಂದು ಪೀಠವು ಹೇಳಿದೆ. ‘ಈ ಪ್ರಕರಣದಲ್ಲಿ ಮಹಿಳೆಯು ವಿಚ್ಛೇದನ ಪಡೆದುಕೊಳ್ಳಲು 12 ವರ್ಷಗಳಿಂದ ನ್ಯಾಯಾಂಗದ ದೇವಾಲಯದಲ್ಲಿ ಕಾಯುತ್ತಿದ್ದಾರೆ. ವಿಳಂಬವಾಗಿರು
ವುದನ್ನು ಸಹಿಸಿಕೊಳ್ಳಲು ಈ ಮಹಿಳೆಯಿಂದ ಸಾಧ್ಯವಿಲ್ಲ. ಅವಳ ಕಣ್ಣೀರಿಗೆ ನಾವು ಸಹ ಉತ್ತರದಾಯಿತ್ವವಾಗಿದ್ದೇವೆ’ ಎಂದು ನ್ಯಾಯಾಲಯ ಹೇಳಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು