ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್‌ ಮಾಜಿ ಪ್ರಧಾನಿ ಷರೀಫ್ ಪುತ್ರಿ ಮರಿಯಂ‌ ನವಾಜ್ ವಿರುದ್ಧ ಭಯೋತ್ಪಾದನೆ ಪ್ರಕರಣ

Last Updated 4 ಸೆಪ್ಟೆಂಬರ್ 2020, 14:47 IST
ಅಕ್ಷರ ಗಾತ್ರ

ಲಾಹೋರ್‌: ಗೂಂಡಾಗಿರಿ ಹಾಗೂ ಪೊಲೀಸರ ಮೇಲೆ ದಾಳಿ ನಡೆಸಿದ ಆರೋಪದಡಿ ಪಾಕಿಸ್ತಾನ ಮುಸ್ಲಿಂ ಲೀಗ್‌–ನವಾಜ್‌(ಪಿಎಂಎಲ್‌–ಎನ್‌) ಉಪಾಧ್ಯಕ್ಷೆ, ನವಾಜ್‌ ಷರೀಫ್‌ ಪುತ್ರಿ ಮರಿಯಂ‌ ನವಾಜ್‌ ಹಾಗೂ ಆಕೆಯ ಪಕ್ಷದ 300 ಕಾರ್ಯಕರ್ತರ ವಿರುದ್ಧ ಭಯೋತ್ಪಾದನೆ ಪ್ರಕರಣವನ್ನು ಶುಕ್ರವಾರ ದಾಖಲಿಸಲಾಗಿದೆ.

ಭೂಅಕ್ರಮ ಪ್ರಕರಣದ ವಿಚಾರಣೆಗಾಗಿ ಲಾಹೋರ್‌ನಲ್ಲಿನ ‘ರಾಷ್ಟ್ರೀಯ ಲೆಕ್ಕಪರಿಶೋಧನಾ ಸಂಸ್ಥೆ’ಗೆಮೂರು ವಾರದ ಹಿಂದೆ ನವಾಜ್‌ ಆಗಮಿಸಿದ್ದರು. ಈ ಸಂದರ್ಭದಲ್ಲಿ ನಡೆದಿದ್ದ ಪೊಲೀಸರ ಜೊತೆಗಿನ ಘರ್ಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಪಿಎಂಎಲ್‌–ಎನ್‌ ನಾಯಕರು ಹಾಗೂ ಕಾರ್ಯಕರ್ತರ ವಿರುದ್ಧ ಪೊಲೀಸರು ಎಫ್‌ಐಆರ್‌ ದಾಖಲಿಸಿದೆ. ಇದರಲ್ಲಿ ಭಯೋತ್ಪಾದನೆ ನಿಗ್ರಹ ಕಾಯ್ದೆಯ(ಎಟಿಎ) ಸೆಕ್ಷನ್‌ 7ನ್ನು ಸೇರಿಸಲಾಗಿದೆ. ಇದನ್ನು ಪಿಎಂಎಲ್‌–ಎನ್‌ ಖಂಡಿಸಿದ್ದು, ಇದರ ಹಿಂದೆ ಪ್ರಧಾನಿ ಇಮ್ರಾನ್‌ ಖಾನ್‌ ಪಿತೂರಿ ಇದೆ ಎಂದು ಆರೋಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT