ಶನಿವಾರ, ಅಕ್ಟೋಬರ್ 1, 2022
20 °C

ಮಾತೃತ್ವ ರಜೆಯು ಮಹಿಳೆಯ ಹಕ್ಕು: ಸುಪ್ರೀಂ ಕೋರ್ಟ್‌

ಪ್ರಜಾವಾಣಿವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಮಾತೃತ್ವ ರಜೆ ಮಹಿಳೆಯ ಹಕ್ಕು. ಸ್ವಾಭಾವಿಕ ಹೆರಿಗೆಯಿಂದ ಪಡೆಯದ ಮಗವಿನ ಪಾಲನೆಗೆ ರಜೆ ತೆಗೆದುಕೊಂಡಿದ್ದರೂ ಮಾತೃತ್ವ ರಜೆಯ ಹಕ್ಕನ್ನು ಕಸಿದುಕೊಳ್ಳುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ಬುಧವಾರ ಹೇಳಿದೆ.

ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್‌ ಮತ್ತು ಎ.ಎಸ್‌. ಬೋಪಣ್ಣ ಅವರ ನೇತೃತ್ವದ ಪೀಠವು, ಕೇಂದ್ರ ನಾಗರಿಕ ಸೇವೆಗಳ ನಿಯಮಗಳು (ಸಿಸಿಎಸ್ ನಿಯಮಗಳು) ಅಡಿಯಲ್ಲಿ ಮಹಿಳೆಗೆ ಶಿಶು ಆರೈಕೆ ರಜೆ ಹಕ್ಕು ಮೊಟಕುಗೊಳಿಸುವಂತಿಲ್ಲ. ಹೆರಿಗೆ ರಜೆಗೆ ಸಂಬಂಧಿಸಿದ ಸಿಸಿಸಿಎಸ್ ನಿಯಮಗಳ ನಿಬಂಧನೆಗಳನ್ನು ಹೆರಿಗೆ ಸೌಲಭ್ಯ ಕಾಯ್ದೆಯ ಆಶಯಕ್ಕೆ ಅನುಗುಣವಾಗಿ ಪರಿಗಣಿಸಬೇಕು ಎಂದು ಹೇಳಿದೆ.

ಚಂಡೀಗಡದ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸ್ನಾತಕೋತ್ತರ ಸಂಸ್ಥೆಯಲ್ಲಿ ನರ್ಸ್‌ವೊಬ್ಬರಿಗೆ ಸಿಎಸ್‌ಸಿ ಕಾಯಿದೆ 2013ರ ಅಡಿ ಕೋರಿದ್ದ ಹೆರಿಗೆ ರಜೆ ಸೌಲಭ್ಯ ನಿರಾಕರಿಸಲಾಗಿತ್ತು. ಮೊದಲ ಮದುವೆಯಲ್ಲಿ ಜೈವಿಕ ತಂದೆಯಿಂದ ಜನಿಸಿದ ಇಬ್ಬರು ಮಕ್ಕಳಿಗೆ ಈ ರೀತಿಯ ರಜೆ ಸೌಲಭ್ಯ ಪಡೆದಿದ್ದಾರೆ ಎಂಬ ಕಾರಣಕ್ಕಾಗಿ, ಆಕೆಯ ಎರಡನೇ ಮದುವೆಯಿಂದ ಜನಿಸಿದ ಮಗುವಿನ ಆರೈಕೆ ರಜೆ ನಿರಾಕರಿಸಿತ್ತು. ಇದನ್ನು ಕೇಂದ್ರೀಯ ಆಡಳಿತ ನ್ಯಾಯಮಂಡಳಿ, ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಎತ್ತಿ ಹಿಡಿದಿದ್ದವು.

ಈ ಆದೇಶ ಪ್ರಶ್ನಿಸಿ ಅರ್ಜಿದಾರ ಮಹಿಳೆ ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದರು. ವಕೀಲ ಅಕ್ಷಯ್‌ ವರ್ಮಾ ಮಹಿಳೆ ಪರ ವಾದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು