ಭಾನುವಾರ, ಫೆಬ್ರವರಿ 28, 2021
31 °C

ವೈಮಾನಿಕ ಕವಾಯತಿನಲ್ಲಿ ರಫೇಲ್‌ ಪ್ರದರ್ಶನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಫ್ರಾನ್ಸ್‌ನ ವಾಯುಪಡೆ ಹಾಗೂ ಸ್ಪೇಸ್‌ ಫೋರ್ಸ್‌ ಜೊತೆಗೂಡಿ ಜೋಧ್‌ಪುರದಲ್ಲಿ ಭಾರತೀಯ ವಾಯುಪಡೆಯು ನಡೆಸುತ್ತಿರುವ ‘ಎಕ್ಸ್‌–ಡೆಸರ್ಟ್‌ನೈಟ್‌21’ ವೈಮಾನಿಕ ಕವಾಯತಿನಲ್ಲಿ ಭಾರತೀಯ ವಾಯುಪಡೆಯ ರಫೇಲ್‌, ಸುಖೋಯ್‌, ಮಿರಾಜ್‌ 2000 ಯುದ್ಧ ವಿಮಾನಗಳು ತಮ್ಮ ಸಾಮರ್ಥ್ಯ ಪ್ರದರ್ಶಿಸಿದವು.

ಐದು ದಿನಗಳು ನಡೆಯಲಿರುವ ಈ ಕವಾಯತು, ಬುಧವಾರದಿಂದ ಆರಂಭವಾಗಿದೆ. ಕವಾಯತಿನಲ್ಲಿ ಏರ್‌ಬಾರ್ನ್‌ ವಾರ್ನಿಂಗ್‌ ಆ್ಯಂಡ್‌ ಕಂಟ್ರೋಲ್‌ ಸಿಸ್ಟಂ(ಎಡಬ್ಲ್ಯುಎಸಿಎಸ್‌) ವಿಮಾನವೂ ಭಾಗವಹಿಸಿದೆ.

ಫ್ರಾನ್ಸ್‌ನ ರಫೇಲ್‌, ಏರ್‌ಬಸ್‌ ಎ–330 ಮಲ್ಟಿ ರೋಲ್‌ ಟ್ಯಾಂಕರ್‌ ಟ್ರಾನ್ಸ್‌ಪೋರ್ಟ್‌ ಸೇರಿದಂತೆ ಹಲವು ಯುದ್ಧ ವಿಮಾನಗಳು ಭಾಗವಹಿಸಿದ್ದು, ಫ್ರಾನ್ಸ್‌ನ ವಾಯುಪಡೆಯ 175ಕ್ಕೂ ಅಧಿಕ ಸಿಬ್ಬಂದಿ ಕವಾಯತಿನ ಭಾಗವಾಗಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು