ಬುಧವಾರ, ಜುಲೈ 6, 2022
22 °C

ಜಾಮೀನು ಪಡೆದ ಜಿಗ್ನೇಶ್‌ ಮೆವಾನಿ ಮರುಬಂಧನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕೋಕ್ರಜಾರ್‌, ಅಸ್ಸಾಂ: ಟ್ವೀಟ್‌ ಪ್ರಕರಣದಲ್ಲಿ ಜಾಮೀನು ಪಡೆದು ಬಿಡುಗಡೆಗೊಂಡ ಗುಜರಾತ್‌ನ ಶಾಸಕ ಜಿಗ್ನೇಶ್‌ ಮೆವಾನಿ ಅವರನ್ನು ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಮತ್ತೆ ಬಂಧಿಸಲಾಗಿದೆ.

ಪ್ರಧಾನಿ ವಿರುದ್ಧ ಆಕ್ಷೇಪಾರ್ಹ ಟ್ವೀಟ್ ಆರೋಪದಡಿ ಮೆವಾನಿ ಅವರನ್ನು ಅಸ್ಸಾಂನ ಪೊಲೀಸರು ಏ.19ರಂದು ಬಂಧಿಸಿದ್ದರು. ಕೋರ್ಟ್ ಈ ಬಗ್ಗೆ ಜಾಮೀನು ನೀಡಿತ್ತು. ಸರ್ಕಾರಿ ಸೇವೆಗೆ ಅಡ್ಡಿ ಆರೋಪಗಳಿಗೆ ಸಂಬಂಧಿಸಿ ಮೆವಾನಿ ವಿರುದ್ಧ ಮತ್ತೊಂದು ಪ್ರಕರಣ ದಾಖಲಿಸಲಾಗಿದೆ.

ಕೋಕ್ರಜಾರ್ ಜೆಎಂಎಫ್‌ಸಿ ನ್ಯಾಯಾಧೀಶರಾದ ಭಾವನಾ ಕಕೊಟಿ ಜಾಮೀನು ನೀಡಿದ್ದರು. ಪ್ರಧಾನಿ ಅವರನ್ನು ಉಲ್ಲೇಖಿಸಿ ‘ಗೋಡ್ಸೆಯನ್ನು ದೇವರಂತೆ ಪರಿಗಣಿಸಲಾಗಿದೆ’ ಎಂದು ಟ್ವೀಟ್‌ ಮಾಡಿದ್ದು, ಇದು ಆಕ್ಷೇಪಾರ್ಹವಾದುದು ಎಂದು ಈ ಮೊದಲು ಬಂಧಿಸಲಾಗಿತ್ತು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು