ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಕಿಪಾಕ್ಸ್‌: ಕೇಂದ್ರದಿಂದ ಮಾರ್ಗಸೂಚಿ ಬಿಡುಗಡೆ– 21 ದಿನಗಳ ಪ್ರತ್ಯೇಕವಾಸ

Last Updated 27 ಜುಲೈ 2022, 14:47 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಮಂಕಿಪಾಕ್ಸ್‌ ರೋಗಿಗಳಿಗೆ ಕೇಂದ್ರ ಸರ್ಕಾರವು ಮಾರ್ಗಸೂಚಿಗಳನ್ನು ಬುಧವಾರ ಬಿಡುಗಡೆ ಮಾಡಿದೆ.

21 ದಿನಗಳ ಪ್ರತ್ಯೇಕವಾಸ, ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಕೈ ಸ್ವಚ್ಛತೆ, ಗಾಯಗಳನ್ನು ಗಾಳಿಗೆ ಆಡದಂತೆ ಸಂಪೂರ್ಣವಾಗಿ ಮುಚ್ಚಿಕೊಳ್ಳುವುದು ಮತ್ತು ಗಾಯಗಳು ಸಂಪೂರ್ಣ ಗುಣವಾಗುವವರೆಗೂ ಕಾಯುವುದು. ಇವು ಕೇಂದ್ರದ ಮಾರ್ಗಸೂಚಿಗಳಾಗಿವೆ.

ದೆಹಲಿಯಲ್ಲಿ ಮಂಕಿಪಾಕ್ಸ್‌ನ ಒಂದು ಪ್ರಕರಣ ಪತ್ತೆಯಾಗಿದೆ. ಇದೂ ಸೇರಿ ದೇಶದಲ್ಲಿ ಒಟ್ಟು ನಾಲ್ಕ ಪ್ರಕರಣಗಳು ದಾಖಲಾಗಿದೆ. ಮಂಕಿಪಾಕ್ಸ್‌ ಪತ್ತೆಯಾದ ದೆಹಲಿಯ ವ್ಯಕ್ತಿಯ ಸಂಪರ್ಕಕ್ಕೆ ಬಂದಿದ್ದ 14 ಮಂದಿಯನ್ನು ಗುರುತಿಸಲಾಗಿದೆ. ಯಾರೂ ರೋಗದ ಲಕ್ಷಣಗಳನ್ನು ತೋರ್ಪಡಿಸಿಲ್ಲ. ಇವರಲ್ಲಿ ಒಬ್ಬರು ಮಾತ್ರ ಮೈಕೈ ನೋವು ಎಂದಿದ್ದರು. ಆದರೆ, ಅವರಲ್ಲಿ ಯಾವುದೇ ರೋಗ ಲಕ್ಷಣಗಳಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT