ಸೋಮವಾರ, ಅಕ್ಟೋಬರ್ 18, 2021
25 °C

ದಲಿತರ ಮೇಲೆ ದೌರ್ಜನ್ಯ: ರಾಹುಲ್‌,ಪ್ರಿಯಾಂಕಾಗೆ ವಿಮಾನ ಟಿಕೆಟ್‌ ಕಳುಹಿಸಿದ ಬಿಜೆಪಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಂದೋರ್‌ (ಪಿಟಿಐ): ಮಧ್ಯಪ್ರದೇಶದ ಇಂದೋರ್‌ನ ಬಿಜೆಪಿ ನಾಯಕರು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರಿಗೆ ಬುಧವಾರ ವಿಮಾನ ಟಿಕೆಟ್‌ ಕಳುಹಿಸಿದ್ದಾರೆ.

ದಲಿತರ ಮೇಲೆ ದೌರ್ಜನ್ಯ ನಡೆದಿದೆ ಎಂದು ಹೇಳಲಾದ ತಮ್ಮ ಪಕ್ಷದ ಆಡಳಿತವಿರುವ ರಾಜಸ್ಥಾನಕ್ಕೆ ಭೇಟಿ ನೀಡುವಂತೆ ಹೇಳಿದ್ದಾರೆ.

ನೆಹರೂ ಕುಟುಂಬದ ಇಬ್ಬರೂ ಉತ್ತರ ಪ್ರದೇಶದಲ್ಲಿ ರಾಜಕೀಯ ಪ್ರವಾಸದಲ್ಲಿ ತೊಡಗಿದ್ದಾರೆ. ಅಲ್ಲಿ ಅವರು ಲಖಿಂಪುರ–ಖೇರಿ ಹಿಂಸಾಚಾರದಲ್ಲಿ ಮೃತಪಟ್ಟ ರೈತರ ಕುಟುಂಬಗಳನ್ನು ಭೇಟಿಯಾಗಿದ್ದಾರೆ. ಆದರೆ, ಅವರ ಪಕ್ಷದ ಆಡಳಿತವಿರುವ ರಾಜಸ್ಥಾನದಲ್ಲಿ ದಲಿತರಿಗೆ ಏನಾಗುತ್ತಿದೆ ಎಂದು ನೋಡಲೂ ಸಮಯವಿಲ್ಲ ಎಂದು ಬಿಜೆಪಿ ವ್ಯಂಗ್ಯವಾಡಿದೆ. 

‘ನಾವು ನಿಧಿಯನ್ನು ಸಂಗ್ರಹಿಸಿ ರಾಹುಲ್‌ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾ ಅವರಿಗೆ ದೆಹಲಿ–ಜೈಪುರ ವಿಮಾನ ಟಿಕೆಟ್‌ಗಳನ್ನು ಕಳುಹಿಸಿದ್ದೇವೆ. ಇದರಿಂದ ಅವರು ತಮ್ಮ ಪಕ್ಷದ ಆಡಳಿತವಿರುವ ರಾಜಸ್ಥಾನದಲ್ಲಿ ದಮನಕ್ಕೊಳಗಾದ ದಲಿತ ಸಮುದಾಯವನ್ನು ಭೇಟಿ ಮಾಡಬಹುದು’ ಎಂದು ಇಂದೋರ್‌ ಜಿಲ್ಲಾ ಬಿಜೆಪಿ ಮುಖ್ಯಸ್ಥ ರಾಜೇಶ್‌ ಸೋಂಕರ್‌ ಹೇಳಿದರು.  

 

  

  

  

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು