ಮುಂಬೈ ದೈನಂದಿನ ಕೊರೊನಾ ಸೋಂಕು ಪ್ರಕರಣ 10 ಸಾವಿರಕ್ಕಿಂತಲೂ ಕಡಿಮೆ ದಾಖಲು

ಮುಂಬೈ: ವಾಣಿಜ್ಯ ನಗರಿ ಮುಂಬೈನಲ್ಲಿ ಕೊರೊನಾ ಸೋಂಕು ಪ್ರಕರಣ ಇಳಿಮುಖವಾಗಿವೆ. ಭಾನುವಾರ ಸಂಜೆಯ ವೇಳೆಗೆ ಕೊನೆಗೊಂಡಂತೆ 24 ತಾಸಿನ ಅವಧಿಯಲ್ಲಿ 7,895 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ.
ಈ ಮೂಲಕ ದೈನಂದಿನ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ 10 ಸಾವಿರಕ್ಕಿಂತಲೂ ಕಡಿಮೆ ದಾಖಲಾಗಿವೆ. ಶನಿವಾರದಂದು ಮುಂಬೈನಲ್ಲಿ 10,661 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದವು.
ಇದೇ ಅವಧಿಯಲ್ಲಿ ಸೋಂಕಿನಿಂದಾಗಿ 11 ಮಂದಿ ಮೃತಪಟ್ಟಿದ್ದಾರೆ.
ಇದನ್ನೂ ಓದಿ: ಜನವರಿ 7 ರಿಂದ 13ರ ಅವಧಿಯಲ್ಲಿ ಕೋವಿಡ್ ಪ್ರಸರಣ ಸೂಚ್ಯಂಕ 2.2ಕ್ಕೆ ಇಳಿಕೆ
COVID19 | Mumbai reports 7,895 new cases & 11 deaths today; Active cases 60,371 pic.twitter.com/Grv3TRMtmh
— ANI (@ANI) January 16, 2022
ಸಕ್ರಿಯ ಪ್ರಕರಣಗಳ ಸಂಖ್ಯೆ 60,371ಕ್ಕೆ ತಲುಪಿದೆ. 21,025 ಮಂದಿ ಗುಣಮುಖರಾಗಿದ್ದು, 688 ಮಂದಿ ಸೋಂಕಿನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಒಟ್ಟಾರೆಯಾಗಿ ಮಹಾರಾಷ್ಟ್ರದಲ್ಲಿ ಕೋವಿಡ್ ದೃಢಪಟ್ಟ 41,327 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 29 ಮಂದಿ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ.
ರಾಜ್ಯದಲ್ಲಿ ಕೊರೊನಾ ವೈರಸ್‌ನ ರೂಪಾಂತರ ತಳಿ ಓಮೈಕ್ರಾನ್ ಸೋಂಕಿನ ಎಂಟು ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಪ್ರಕರಣ 1,738ಕ್ಕೆ ತಲುಪಿದೆ.
#COVID19 | 41,327 new cases & 29 deaths reported in Maharashtra today; Active caseload stands at 2,65,346
8 Omicron infections were reported in the state today, taking the case tally to 1,738. pic.twitter.com/hMNs36Kjfl
— ANI (@ANI) January 16, 2022
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.