ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈನಲ್ಲಿ ಲಾಕ್‌ಡೌನ್ ತೆರವು: ಎರಡು ತಿಂಗಳ ನಂತರ ಆರಂಭವಾದ ಜಿಮ್‌ಗಳು

ಮಹಾರಾಷ್ಟ್ರದಲ್ಲಿ ಐದು ಹಂತಗಳ ಲಾಕ್‌ಡೌನ್ ತೆರವು ಪ್ರಕ್ರಿಯೆ ಆರಂಭ
Last Updated 7 ಜೂನ್ 2021, 9:14 IST
ಅಕ್ಷರ ಗಾತ್ರ

ಮುಂಬೈ: ಕೊರೊನಾ ಸೋಂಕು ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ಐದು ಹಂತಗಳಲ್ಲಿ ಲಾಕ್‌ಡೌನ್ ಸಡಿಲಿಕೆ ಆರಂಭಿಸಿದ್ದು, ಮುಂಬೈನಲ್ಲಿ ಸೋಮವಾರ ಎರಡು ತಿಂಗಳ ನಂತರ ರೆಸ್ಟೋರೆಂಟ್‌, ಜಿಮ್‌, ಸೆಲೂನ್‌, ಕ್ರೀಡಾ ಮೈದಾನ ಸೇರಿದಂತೆ ಇತರೆ ವಾಣಿಜ್ಯ ಸಂಕೀರ್ಣಗಳನ್ನು ತೆರೆಯಲಾಗಿದೆ.

ಲಾಕ್‌ಡೌನ್ ತೆರವು ಆರಂಭಿಸಿದ ನಂತರ ಬೃಹನ್‌ ಮುಂಬೈ ಮಹಾನಗರ ಪಾಲಿಕೆ(ಬಿಎಂಸಿ), ಕೋವಿಡ್‌ 19 ಸೋಂಕು ಪ್ರಸರಣ ತಡೆಗೆ ವಿಧಿಸಿರುವ ಎಲ್ಲ ಮಾರ್ಗಸೂಚಿ, ನಿಯಮಗಳನ್ನು ಸಾರ್ವಜನಿಕರು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಸರ್ಕಾರದೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದೆ.

ವೈದ್ಯಕೀಯ ಮತ್ತು ಅಗತ್ಯ ಸೇವೆಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಮಾತ್ರ ಸ್ಥಳೀಯ ರೈಲುಗಳಲ್ಲಿ ಸಂಚರಿಸುವುದಕ್ಕೆ ಅವಕಾಶವಿದೆ. ಬಿಎಂಸಿ ಬಸ್ಸುಗಳು, ಬೃಹನ್ಮುಂಬೈ ವಿದ್ಯುತ್ ಸರಬರಾಜು ಮತ್ತು ಸಾರಿಗೆ ಸಂಸ್ಥೆ (ಬಿಇಎಸ್‌ಟಿ), ನಗರ ಸಾರಿಗೆ ಸಂಸ್ಥೆಯ ವಿಭಾಗ ಬಸ್ಸುಗಳಲ್ಲಿ ಸ್ಥಳೀಯ ನಾಗರಿಕರು ಶೇ 100ರ ಆಸನದ ಸಾಮರ್ಥ್ಯದೊಂದಿಗೆ ಪ್ರಯಾಣಿಸಲು ಅವಕಾಶ ಇದೆ.

ಈ ಕುರಿತು ಟ್ವೀಟ್‌ ಮಾಡಿರುವ ಬಿಎಂಸಿ, ‘ಮುಂಬೈನಲ್ಲಿ ಸಹಜ ಸ್ಥಿತಿ ತರುವುದಕ್ಕಾಗಿ, ನಾವು ಹಂತ ಹಂತವಾಗಿ ಲಾಕ್‌ಡೌನ್ ತೆರೆಯುತ್ತಿದ್ದೇವೆ. ಕೋವಿಡ್‌ ಮುಕ್ತ ಮುಂಬೈಯನ್ನಾಗಿಸುವುದು ನಮ್ಮ ಗುರಿಯಾಗಿದೆ. Coviಎಲ್ಲರೂ ಮುನ್ನೆಚ್ಚರಿಕೆಗಳನ್ನು ಅನುಸರಿಸಬೇಕೆಂದು ಮನವಿ ಮಾಡುತ್ತಿದ್ದೇವೆ‘ ಎಂದು ಹೇಳಿದೆ.

ವಾರದ ಪಾಸಿಟಿವಿಟಿರೇಟ್ ಮತ್ತು ಆಸ್ಪತ್ರೆಯಲ್ಲಿ ಆಮ್ಲಜನಕ ಸಹಿತ ಹಾಸಿಗೆಗಳ ಬಳಕೆ ಆಧಾರದ ಮೇಲೆ ರಾಜ್ಯದಲ್ಲಿ ಕೊರೊನಾ ಸೋಂಕಿನ ನಿಯಂತ್ರಣಕ್ಕಾಗಿ ವಿಧಿಸಿರುವ ನಿರ್ಬಂಧವನ್ನು ಐದು ಹಂತಗಳಲ್ಲಿ ತೆರವುಗೊಳಿಸುತ್ತಿರುವುದಾಗಿ ಮಹಾರಾಷ್ಟ್ರ ಸರ್ಕಾರ ಪ್ರಕಟಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT