ಭಾನುವಾರ, ಮೇ 16, 2021
25 °C

ಭಾರತದಲ್ಲಿ ಕ್ಷೀಣಿಸಿದ ಧಾರ್ಮಿಕ ಸ್ವಾತಂತ್ರ್ಯ: ಅಮೆರಿಕದ ಅಂತರರಾಷ್ಟ್ರೀಯ ಆಯೋಗ

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಕ್ಷೀಣಿಸಿದೆ ಎಂದು ಆರೋಪಿಸಿರುವ ಅಮೆರಿಕದ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗ (ಯುಎಸ್‌ಸಿಐಆರ್‌ಎಫ್‌), ಭಾರತವನ್ನು ‘ನಿರ್ದಿಷ್ಟ ಕಳವಳದ ದೇಶ’ (ಸಿಪಿಸಿ) ಎಂದು ಹೆಸರಿಸುವಂತೆ ಶಿಫಾರಸು ಮಾಡಿದೆ.

ಈ ಅಭಿಪ್ರಾಯಕ್ಕೆ ಭಾರತೀಯ–ಅಮೆರಿಕನ್‌ ಮುಸ್ಲಿಂ, ಸಿಖ್, ಕ್ರಿಶ್ಚಿಯನ್‌ ಸಮುದಾಯಗಳು ಮೆಚ್ಚುಗೆ ವ್ಯಕ್ತಪಡಿಸಿವೆ.  ಯುಎಸ್‌ಸಿಐಆರ್‌ಎಫ್‌ ತನ್ನ ವಾರ್ಷಿಕ ವರದಿಯಲ್ಲಿ ಮಾಡಿರುವ ಶಿಫಾರಸುಗಳನ್ನು ಸ್ವೀಕರಿಸುವಂತೆ ಅಮೆರಿಕದ ಸರ್ಕಾರವನ್ನು ಒತ್ತಾಯಿಸಿವೆ.

‘ಧಾರ್ಮಿಕ ಸ್ವಾತಂತ್ರ್ಯವನ್ನು ಅತಿ ಹೆಚ್ಚು ಉಲ್ಲಂಘನೆ ಮಾಡುವ ವಿಶ್ವದ ರಾಷ್ಟ್ರಗಳಲ್ಲಿ ಭಾರತವನ್ನು ಹೆಸರಿಸುವುದು ದುರದೃಷ್ಟಕರ. ಆದರೆ ಈ ರೀತಿಯ ನಡೆಯನ್ನು ಮೊದಲೇ ನಿರೀಕ್ಷಿಸಲಾಗಿತ್ತು ಹಾಗೂ ಇದನ್ನು ಸಮರ್ಥಿಸಿಕೊಳ್ಳಲಾಗಿದೆ’ಎಂದು ಭಾರತೀಯ–ಅಮೆರಿಕನ್‌ ಮುಸ್ಲಿಂ ಸಮಿತಿಯ ಕಾರ್ಯನಿರ್ವಾಹಕ ನಿರ್ದೇಶಕ ರಶೀದ್‌ ಅಹ್ಮದ್‌ ಹೇಳಿದರು.

‘ಭಾರತವನ್ನು ಸಿಪಿಸಿ ಎಂದು ಹೆಸರಿಸುವ ಯುಎಸ್‌ಸಿಐಆರ್‌ಎಫ್‌ನ ಶಿಫಾರಸನ್ನು ಅಮೆರಿಕದ ವಿದೇಶಾಂಗ ಇಲಾಖೆ ಸ್ವೀಕರಿಸುತ್ತದೆ ಎಂಬ ನಿರೀಕ್ಷೆಯಿದೆ’ ಎಂದು ಅವರು ತಿಳಿಸಿದರು. 

‘ಯುಎಸ್‌ಸಿಐಆರ್‌ಎಫ್‌ ಪಕ್ಷಪಾತದಿಂದ ವರ್ತಿಸುತ್ತಿದೆ’ ಎಂದು ಭಾರತ ಈ ಹಿಂದೆಯೇ ದೂರಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು