ಗುರುವಾರ , ಮಾರ್ಚ್ 30, 2023
24 °C

ಎಡನೀರು ಶ್ರೀಗಳ ನಿಧನಕ್ಕೆ ಉಪರಾಷ್ಟ್ರಪತಿ ಸಂತಾಪ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕಾಸರಗೋಡು ಜಿಲ್ಲೆಯ ಎಡನೀರು ಮಠದ ಕೇಶವಾನಂದ ಭಾರತಿ ಸ್ವಾಮೀಜಿ ಅವರ ನಿಧನಕ್ಕೆ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.

‘ಕೇಶವಭಾರತಿ ಸ್ವಾಮೀಜಿ ಅವರು ಉತ್ತಮ ತತ್ವಜ್ಞಾನಿ, ಶಾಸ್ತ್ರೀಯ ಗಾಯಕ ಹಾಗೂ ಸಾಂಸ್ಕೃತಿಕ ಮಿಶ್ರಣದ ಪ್ರತೀಕವಾಗಿದ್ದರು‘ ಎಂದು ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಬಣ್ಣಿಸಿದ್ದಾರೆ.

‘ಸಂವಿಧಾನದ ಮೂಲ ಆಶಯ ಮತ್ತು ಸ್ವರೂಪವನ್ನು ಬದಲಾಯಿಸಲಾಗುವುದಿಲ್ಲ ಎಂಬ ಸುಪ್ರಿಂಕೋರ್ಟ್‌ ನೀಡಿದ ಮಹತ್ವದ ತೀರ್ಪಿನಲ್ಲಿ ಶ್ರೀಗಳ ಪಾತ್ರ ಬಹು ಮುಖ್ಯವಾಗಿತ್ತು‘ ನಾಯ್ಡು ಸ್ಮರಿಸಿದ್ದಾರೆ.

ಶ್ರೀಗಳು ಯಕ್ಷಗಾನಕ್ಕೆ ಪ್ರೋತ್ಸಾಹ ನೀಡುವ ಮೂಲಕ ಕರ್ನಾಟಕದ ಸಾಂಪ್ರದಾಯಿಕ ರಂಗಭೂಮಿಯ ಪುನರುಜ್ಜೀವನಕ್ಕೆ ದೊಡ್ಡ ಕೊಡುಗೆ ನೀಡಿದ್ದರು ಎಂದು ನೆನಪಿಸಿಕೊಂಡಿದ್ದಾರೆ. ಶ್ರೀಗಳ ನಿಧನದ ಮೂಲಕ ನಾವು ನಮ್ಮ ಪ್ರಮುಖ ಆಧ್ಯಾತ್ಮಿಕ ನಾಯಕರೊಬ್ಬರನ್ನು ಕಳೆದುಕೊಂಡಿದ್ದೇವೆ.

ಅವರ ಜೀವನವು ಭವಿಷ್ಯದ ಪೀಳಿಗೆಗೆ ದಾರಿ ತೋರುವ ಬೆಳಕಾಗಿರುತ್ತದೆ. ಓಂ ಶಾಂತಿ‘ ಎಂದು ನಾಯ್ಡು ಅವರು ಟ್ವೀಟ್‌ನಲ್ಲಿ ಸಂತಾಪ ಸೂಚಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು