ಸೋಮವಾರ, ಅಕ್ಟೋಬರ್ 3, 2022
21 °C

ಪ್ರಧಾನಿ ಮೋದಿಗೆ ಉಡುಗೊರೆ ಬಂದಿದ್ದ ವಸ್ತುಗಳ ಹರಾಜು ನಾಳೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಪ್ರಧಾನಿ ಮೋದಿ ಅವರಿಗೆ ಉಡುಗೊರೆಯಾಗಿ ಬಂದಿರುವ ಸುಮಾರು 1200 ಪರಿಕರ, ವಸ್ತುಗಳನ್ನು ಶನಿವಾರ ಹರಾಜು ಹಾಕಲಾಗುತ್ತದೆ.

ಮೈಸೂರಿನ ಶಿಲ್ಪಿ ಅರುಣ್‌ ಯೋಗಿರಾಜ್‌ ಏಕಶಿಲೆಯಲ್ಲಿ ಕೆತ್ತಿರುವ ನೇತಾಜಿ ಸುಭಾಷ್ ಚಂದ್ರಬೋಸ್ ಅವರ ಎರಡು ಅಡಿ ಎತ್ತರದ ಮೂರ್ತಿ, ಕಾಮನ್‌ವೆಲ್ತ್‌ ಕ್ರೀಡೆಯ ಪದಕ ವಿಜೇತರು ನೀಡಿರುವ ವಿವಿಧ ಉಡುಗೊರೆಗಳು ಇದರಲ್ಲಿ ಸೇರಿವೆ.

ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಕೇಂದ್ರ ಸಂಸ್ಕೃತಿ ಸಚಿವ ಜಿ.ಕಿಶನ್‌ ರೆಡ್ಡಿ, ಗಣೇಶ ಮೂರ್ತಿ, ನಿರ್ಮಾಣವಾಗುತ್ತಿರುವ ರಾಮಮಂದಿರ ಮತ್ತು ನವೀಕೃತ ಕಾಶಿ ವಿಶ್ವನಾಥ ದೇವಸ್ಥಾನದ ಪ್ರತಿಕೃತಿಗಳು ಈಗ ಹರಾಜು ಹಾಕಲಾಗುವ ಪರಿಕರಗಳಲ್ಲಿ ಸೇರಿವೆ. ಹರಾಜಿನಲ್ಲಿ ಸಂಗ್ರಹವಾಗುವ ಮೊತ್ತವನ್ನು ‘ನಮಾಮಿ ಗಂಗೆ ಮಿಷನ್’ ಕಾರ್ಯಕ್ರಮಕ್ಕೆ ಬಳಸಲಾಗುವುದು ಎಂದು ಅವರು ತಿಳಿಸಿದರು.

ಈಚೆಗೆ ನವದೆಹಲಿಯ ಇಂಡಿಯಾ ಗೇಟ್‌ ಬಳಿ ಪ್ರಧಾನಿ ಅನಾವರಣಗೊಳಿಸಿದ 28 ಅಡಿ ಎತ್ತರದ ನೇತಾಜಿ ಅವರ ಪ್ರತಿಮಯನ್ನು ಶಿಲ್ಪಿ ಯೋಗಿರಾಜ್‌ ಅವರೇ ನಿರ್ಮಿಸಿದ್ದಾರೆ. ಇದೇ ಸಂದರ್ಭದಲ್ಲಿ 2 ಅಡಿ ಎತ್ತರದ ಪ್ರತಿಮೆಯನ್ನು ಪ್ರಧಾನಿಗೆ ಉಡುಗೊರೆ ನೀಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು