ಶನಿವಾರ, ಜುಲೈ 2, 2022
24 °C

ಶಿಮ್ಲಾದಲ್ಲಿ 31ರಂದು ಬಿಜೆಪಿ ಸರ್ಕಾರದ 8ನೇ ವಾರ್ಷಿಕೋತ್ಸವ

ಪಿಟಿಐ Updated:

ಅಕ್ಷರ ಗಾತ್ರ : | |

ಶಿಮ್ಲಾ: ಶಿಮ್ಲಾದಲ್ಲಿ ರೋಡ್‌ಶೋ ಹಮ್ಮಿಕೊಳ್ಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಬಿಜೆಪಿ ಸರ್ಕಾರದ ಎಂಟನೇ ವಾರ್ಷಿಕೋತ್ಸವವನ್ನು ಆಚರಿಸಲಿದ್ದಾರೆ ಎಂದು ಹಿಮಾಚಲ ಪ್ರದೇಶದ ಬಿಜೆಪಿ ಪ್ರಧಾನ ಕಾರ್ಯದರ್ಶಿ ತ್ರಿಲೋಕ್‌ ಜಮ್ವಾಲ್‌ ಹೇಳಿದರು.

ಈ ಕುರಿತು ಮಾಹಿತಿ ನೀಡಿರುವ ಜಮ್ವಾಲ್‌, ‘ಇದೇ 31ರಂದು ಶಿಮ್ಲಾದ ಟೆಲಿಗ್ರಾಫಿಕ್‌ ಕಚೇರಿಯಿಂದ (ಸಿಟಿಒ) ರಾಣಿ ಝಾನ್ಸಿ ಉದ್ಯಾನವನದ‌ವರೆಗೆ ನಡೆಯಲಿರುವ ರೋಡ್‌ಶೋನಲ್ಲಿ ಪ್ರಧಾನಿ ಭಾಗಿಯಾಗಲಿದ್ಧಾರೆ. ನಂತರ ಐತಿಹಾಸಿಕ ರಿಡ್ಜ್‌ ಮೈದಾನದಲ್ಲಿ ನಡೆಯಲಿರುವ ರ‍್ಯಾಲಿಯನ್ನುದ್ದೇಶಿಸಿ ಮೋದಿ ಮಾತನಾಡಲಿದ್ದಾರೆ’ ಎಂದರು.

‘ರೋಡ್‌ಶೋ ಹಾಗೂ ರ‍್ಯಾಲಿ ಬಳಿಕ, ದೇಶದಾದ್ಯಂತ 17 ಸರ್ಕಾರಿ ಯೋಜನೆಗಳ ಫಲಾನುಭವಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಸಂವಾದ ನಡೆಸಲಿದ್ದಾರೆ’ ಎಂದು ಜಮ್ವಾಲ್‌ ಹೇಳಿದರು.  

‍ರ‍್ಯಾಲಿಯ ಸಿದ್ಧತೆಗಳನ್ನು ‍ಪರಿಶೀಲಿಸಿದ ಬಳಿಕ ಜಮ್ವಾಲ್‌ ಅವರು, ‘ನರೇಂದ್ರ ಮೋದಿಯವರು ವಾರ್ಷಿಕೋತ್ಸವ ಆಚರಣೆಗೆ ಶಿಮ್ಲಾವನ್ನು ಆಯ್ಕೆ ಮಾಡಿರುವುದು ಹೆಮ್ಮೆಯ ಸಂಗತಿ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು