ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಖ್ಖರ ಭಾವನೆಗೆ ಧಕ್ಕೆ: ಕ್ಷಮೆಯಾಚಿಸಿದ ನವಜೋತ್ ಸಿಂಗ್‌ ಸಿಧು

Last Updated 30 ಡಿಸೆಂಬರ್ 2020, 9:24 IST
ಅಕ್ಷರ ಗಾತ್ರ

ಚಂಡೀಗಡ: ಸಿಖ್ ಸಮುದಾಯದ ಭಾವನೆಗಳಿಗೆ ಧಕ್ಕೆ ಉಂಟು ಮಾಡಿರುವುದಕ್ಕೆ ಕಾಂಗ್ರೆಸ್‌ ನಾಯಕ ನವಜೋತ್‌ ಸಿಂಗ್‌ ಸಿಧು ಕ್ಷಮೆಯಾಚಿಸಿದ್ದಾರೆ.

ಧಾರ್ಮಿಕ ಚಿಹ್ನೆವುಳ್ಳ ಶಾಲು ಧರಿಸುವ ಮೂಲಕ ಸಿಖ್ ಸಮುದಾಯದ ಭಾವನೆಗೆ ಧಕ್ಕೆ ಮಾಡಿರುವುದರಿಂದ ಸಿಧು ತಕ್ಷಣವೇ ಕ್ಷಮೆಯಾಚಿಸಬೇಕು ಎಂದು ಅಕಾಲ್‌ ತಖ್ತ್‌ ಜಾಥೆದಾರ್‌ ಗಿಯಾನಿ ಹರಪ್ರೀತ್‌ ಸಿಂಗ್‌ ಆಗ್ರಹಿಸಿದ್ದರು.

ಇದೊಂದು ದುರದೃಷ್ಟಕರ ಮತ್ತು ಸಿಖ್ ಸಂಪದ್ರಾಯಕ್ಕೆ ವಿರುದ್ಧವಾಗಿದೆ. ಈ ಬಗ್ಗೆ ಸಮುದಾಯದ ಹಲವರು ನನಗೆ ದೂರು ಸಲ್ಲಿಸಿದ್ದಾರೆ ಎಂದು ಅವರು ಹೇಳಿದ್ದರು.

‘ಶ್ರೀ ಅಕಾಲ್‌ ತಖ್ತ್‌ ಜಾಥೆದಾರ್‌ ಸರ್ವೋಚ್ಛ ಸ್ಥಾನದಲ್ಲಿದ್ದಾರೆ. ಗೊತ್ತಿಲ್ಲದೆಯೇ ಯಾವುದೇ ಒಬ್ಬ ಸಿಖ್ ವ್ಯಕ್ತಿಯ ಭಾವನೆಗೆ ಧಕ್ಕೆ ಮಾಡಿದ್ದರೂ ನಾನು ಕ್ಷಮೆಯಾಚಿಸುತ್ತೇನೆ’ ಎಂದು ನವಜೋತ್‌ ಸಿಂಗ್‌ ಸಿಧು ಟ್ವೀಟ್‌ ಮಾಡಿದ್ದಾರೆ.

ಕೆಲ ದಿನಗಳ ಹಿಂದೆ ಜಲಂಧರ್‌ನಲ್ಲಿ ರೈತರ ಜತೆ ನಡೆಸಿದ ಸಭೆಯ ಸಂದರ್ಭದಲ್ಲಿ ಸಿಧು ಅವರು, ಸಿಖ್ ಧಾರ್ಮಿಕ ಚಿಹ್ನೆವುಳ್ಳ ಶಾಲು ಧರಿಸಿದ್ದರು. ಈ ಬಗ್ಗೆ ಆಕ್ಷೇಪ ವ್ಯಕ್ತವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT