ಮಂಗಳವಾರ, ಮೇ 24, 2022
26 °C

ತಾಯಿಯನ್ನು ನಿರ್ಗತಿಕಳಾಗಿ ಸಾಯುವಂತೆ ಮಾಡಿದ ನವಜೋತ್‌ ಸಿಂಗ್ ಸಿಧು: ಸಹೋದರಿಯ ಆರೋಪ

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ಚಂಡೀಗಢ: ಪಂಜಾಬ್‌ ಕಾಂಗ್ರೆಸ್‌ ರಾಜ್ಯ ಘಟಕದ ಅಧ್ಯಕ್ಷ, ಸೋದರ ನವಜೋತ್‌ ಸಿಂಗ್‌ ಸಿಧು ನಮ್ಮ ತಾಯಿಯನ್ನು ತೊರೆದಿದ್ದರು. ಆಕೆಯನ್ನು ನಿರ್ಗತಿಕರನ್ನಾಗಿ ಮಾಡಿದರು ಎಂದು ಸೋದರಿ ಸುಮನ್‌ ತೂರ್‌ ಅವರು ಶುಕ್ರವಾರ ಆರೋಪಿಸಿದ್ದಾರೆ.

‘1986 ರಲ್ಲಿ ತಮ್ಮ ತಂದೆಯ ಮರಣದ ನಂತರ ಸಿಧು ತಾಯಿಯನ್ನು ತೊರೆದಿದ್ದರು. 1989ರಲ್ಲಿ ಆಕೆ ದೆಹಲಿ ರೈಲು ನಿಲ್ದಾಣದಲ್ಲಿ ನಿರ್ಗತಿಕರಾಗಿ ಮೃತಪಟ್ಟರು’ ಎಂದು ಸುಮನ್‌ ಅವರು ಸೋದರನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಸುದ್ದಿ ಸಂಸ್ಥೆ ಎಎನ್‌ಐ ಶುಕ್ರವಾರ ವರದಿ ಪ್ರಕಟಿಸಿದೆ.

ಸಿಧು ಸೋದರಿ ಸುಮನ್‌ ಅವರು ಅಮೆರಿಕದಲ್ಲಿ ನೆಲೆಸಿದ್ದಾರೆ ಎಂದು ಹೇಳಲಾಗಿದೆ.

ಸುಮನ್‌ ಆರೋಪಕ್ಕೆ ಸಿಧು ಅವರು ಇನ್ನಷ್ಟೇ ಪ್ರತಿಕ್ರಿಯೆ ನೀಡಬೇಕಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು