ಮಂಗಳವಾರ, ಸೆಪ್ಟೆಂಬರ್ 28, 2021
21 °C
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಭಿಮತ

ನೌಕಾಪಡೆಯ ಸ್ವಾವಲಂಬನೆಯಿಂದ ದೇಶದ ಆರ್ಥಿಕಾಭಿವೃದ್ಧಿ: ರಾಷ್ಟ್ರಪತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪಣಜಿ:  ಭಾರತೀಯ ನೌಕಾಪಡೆಯ ಸ್ವಾವಲಂಬನೆಯು ದೇಶವು 5 ಲಕ್ಷ ಕೋಟಿ ಆರ್ಥಿಕತೆಯತ್ತ ಸಾಗಲು ಅನುವು ಮಾಡಿಕೊಡಲಿದೆ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಸೋಮವಾರ ಹೇಳಿದರು.

ಭಾರತೀಯ ನೌಕಾಪಡೆಯ ವೈಮಾನಿಕ ಘಟಕದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಕ್ಷಣಾ ಸಲಕರಣೆಗಳ ಆಮದುಗಳ ಮೇಲೆ ಅವಲಂಬಿತವಾಗಿರುವಾಗ ಯಾವುದೇ ದೇಶವು ಆರ್ಥಿಕ ಅಥವಾ ಪ್ರಾದೇಶಿಕ ಶಕ್ತಿಕೇಂದ್ರವಾಗಿ ಹೊರಹೊಮ್ಮಲು ಸಾಧ್ಯವಿಲ್ಲ ಎಂದು ಹೇಳಿದರು.

‘ಭಾರತೀಯ ನೌಕಾಪಡೆಯು ಸ್ವದೇಶೀಕರಣದಲ್ಲಿ ಮುಂಚೂಣಿಯಲ್ಲಿದೆ. ಇದು ನೌಕಾಪಡೆಯ ಪ್ರಸ್ತುತ ಮತ್ತು ಭವಿಷ್ಯದ ಯೋಜನೆಗಳಲ್ಲಿ ಪ್ರತಿಫಲಿಸುತ್ತಿದೆ. ಇದು ಸ್ವಾವಲಂಬಿಯಾಗಿ ನಡೆಯಲಿದೆ. ಭಾರತೀಯ ನೌಕಾಪಡೆಯ ವೈಮಾನಿಕ ಘಟಕವು ಕೇಂದ್ರ ಸರ್ಕಾರದ ‘ಆತ್ಮ ನಿರ್ಭರ ಭಾರತ್’ ದೃಷ್ಟಿಕೋನದ ಅನುಸಾರವಾಗಿ, ‘ಮೇಕ್ ಇನ್ ಇಂಡಿಯಾ’ ಅಭಿಯಾನಕ್ಕೆ ಅನುಗುಣವಾಗಿ ಸ್ಥಿರ ಪ್ರಗತಿ ಸಾಧಿಸಿದೆ’ ಎಂದು ಕೋವಿಂದ್‌ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು