ಬುಧವಾರ, ಅಕ್ಟೋಬರ್ 28, 2020
28 °C

46 ಜಿಲ್ಲೆಗಳಷ್ಟೇ ನಕ್ಸಲ್ ಪೀಡಿತ: ರಾಜ್ಯಸಭೆಗೆ ಗೃಹ ಸಚಿವಾಲಯದ ಮಾಹಿತಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ದೇಶದ ಹಲವೆಡೆ ನಕ್ಸಲ್‌ ಹಿಂಸಾಚಾರ ಗಣನೀಯವಾಗಿ ಕಡಿಮೆಯಾಗಿದ್ದು, 46 ಜಿಲ್ಲೆಗಳಲ್ಲಿ ಮಾತ್ರ ಭೀತಿ ಮುಂದುವರಿದಿದೆ ಎಂದು ಕೇಂದ್ರ ಗೃಹಸಚಿವಾಲಯ ರಾಜ್ಯಸಭೆಗೆ ತಿಳಿಸಿದೆ.

ರಾಜ್ಯಸಭೆಯಲ್ಲಿ ಕೇಳಿದ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ ಕೇಂದ್ರ ಗೃಹ ಖಾತೆ ರಾಜ್ಯಸಚಿವ ಜಿ.ಕೃಷ್ಣರೆಡ್ಡಿ, ’ದೇಶದ 11 ರಾಜ್ಯಗಳ 90 ಜಿಲ್ಲೆಗಳನ್ನು ಎಡಪಂಥೀಯ ಉಗ್ರಗಾಮಿ ಬಾಧಿತ (ಎಲ್‌ಡಬ್ಲುಇ) ಪ್ರದೇಶಗಳೆಂದು ಪರಿಗಣಿಸಲಾಗಿದೆ.  ಕೇಂದ್ರ ಗೃಹಸಚಿವಾಲಯದ ಭದ್ರತಾ ಸಂಬಂಧಿ ವೆಚ್ಚ (ಎಸ್‌ಆರ್‌ಇ) ಯೋಜನೆಗೆ ಅವು ಒಳಪಡುತ್ತವೆ ಎಂದು ಹೇಳಿದ್ದಾರೆ.

2019ರಲ್ಲಿ 61 ಜಿಲ್ಲೆಗಳಲ್ಲಿ ಹಾಗೂ 2020ರ ಮೊದಲಾರ್ಧದಲ್ಲಿ 46 ಜಿಲ್ಲೆಗಳಲ್ಲಿ ಉಗ್ರರ ಹಿಂಸಾಚಾರ ಘಟನೆಗಳು ನಡೆದಿರುವುದು ವರದಿಯಾಗಿದೆ ಎಂದು ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ. 2015 ರಿಂದ 2020ರ ಆಗಸ್ಟ್ 15 ರವರೆಗೆ ಎಲ್‌ಡಬ್ಲ್ಯುಇ ಪೀಡಿತ ಪ್ರದೇಶಗಳಲ್ಲಿ ನಡೆದ ಹಿಂಸಾಚಾರದಲ್ಲಿ 350 ಭದ್ರತಾ ಸಿಬ್ಬಂದಿ, 963 ನಾಗರಿಕರು ಮತ್ತು 871 ನಕ್ಸಲರು ಸಾವನ್ನಪ್ಪಿದ್ದಾರೆ. ಇದೇ ಅವಧಿಯಲ್ಲಿ ಒಟ್ಟು 4,022 ನಕ್ಸಲರು ಸಹ ಶರಣಾಗಿದ್ದಾರೆ ಎಂದು ರೆಡ್ಡಿ ಮಾಹಿತಿ ನೀಡಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು