ಬುಧವಾರ, ನವೆಂಬರ್ 25, 2020
19 °C

ಜಾರ್ಖಂಡ್‌: ನಾಲ್ವರು ನಕ್ಸಲರ ಬಂಧನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಸಿಮ್ಡೆಗಾ(ಜಾರ್ಖಂಡ್‌): ನಿಷೇಧಿತ ಸಂಘಟನೆ ಪೀಪಲ್ಸ್‌ ಲಿಬರೇಷನ್‌ ಫ್ರಂಟ್ ಆಫ್ ಇಂಡಿಯಾ(ಪಿಎಲ್‌ಎಫ್‌ಐ)ಕ್ಕೆ ಸೇರಿದ ನಾಲ್ವರು ನಕ್ಸಲೀಯರನ್ನು ಸಿಮ್ಡೆಗಾ ಜಿಲ್ಲೆಯಲ್ಲಿ ಬಂಧಿಸಲಾಗಿದೆ.

ಬಂಧಿತರಿಂದ ದೇಶೀಯ ಬಂದೂಕು ಮತ್ತು ಎಂಟು ಕಾಟ್ರಿಡ್ಜ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

’ಖಚಿತ ಮಾಹಿತಿ ಮೇರೆಗೆ ಕನರೊವಾನ್‌ ಅರಣ್ಯ ಪ್ರದೇಶದಲ್ಲಿ ಶೋಧಕಾರ್ಯ ನಡೆಸಿದ ಬಾನೊ ಪೊಲೀಸರು ಈ ನಾಲ್ವರು ನಕ್ಸಲೀಯರನ್ನು ಬಂಧಿಸಿದ್ದಾರೆ’ ಎಂದು ಎಸ್‌ಪಿ ಶಾಮ್ಸ್‌ ತಬ್ರೇಜ್‌ ತಿಳಿಸಿದರು.

ಪೊಲೀಸರನ್ನು ನೋಡಿದ ನಕ್ಸಲರು ಪರಾರಿಯಾಗಲು ಯತ್ನಿಸಿದರು. ಆದರೆ ಸಿಬ್ಬಂದಿ ಅವರನ್ನು ಬೆನ್ನಟ್ಟಿ ಹೋಗಿ ಬಂಧಿಸಿದರು ಎಂದು ಅಧಿಕಾರಿ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು