ಗುರುವಾರ , ಆಗಸ್ಟ್ 11, 2022
24 °C

ಛತ್ತೀಸಗಡ ಸಶಸ್ತ್ರ ಪಡೆಯ ಯೋಧನ ಅಪಹರಿಸಿ ಹತ್ಯೆ ಮಾಡಿದ ನಕ್ಸಲರು

ಎಎನ್ಐ Updated:

ಅಕ್ಷರ ಗಾತ್ರ : | |

ಸಾಂದರ್ಭಿಕ ಚಿತ್ರ

ಬಿಜಾಪುರ (ಛತ್ತೀಸಗಢ): ಏಳು ದಿನಗಳ ಹಿಂದೆ ಕಾಣೆಯಾಗಿದ್ದ ಛತ್ತೀಸಗಡ ಸಶಸ್ತ್ರ ಪಡೆಯ ಯೋಧನನ್ನು ಬಿಜಾಪುರ ಜಿಲ್ಲೆಯ ಪ್ಯಾಡೆಡಾ ಗ್ರಾಮದ ಸಮೀಪ ನಕ್ಸಲರು ಹತ್ಯೆ ಮಾಡಿದ್ದಾರೆ ಎಂದು ಪೊಲೀಸ್ ಸೂಪರಿಂಟೆಂಡೆಂಟ್ ಕಮಲೋಚನ್ ಕಶ್ಯಪ್ ಶುಕ್ರವಾರ ತಿಳಿಸಿದ್ದಾರೆ.

'ನಕ್ಸಲರು ಬಿಜಾಪುರದಲ್ಲಿ ಯೋಧನನ್ನು ಅಪಹರಿಸಿ ಕೊಂದು ಶವವನ್ನು ಗಂಗಲೂರು-ಬಿಜಾಪುರ ರಸ್ತೆಯಲ್ಲಿ ಎಸೆದಿದ್ದಾರೆ. ಕಳೆದ ಏಳು ದಿನಗಳಿಂದ ಯೋಧ ಕಾಣೆಯಾಗಿದ್ದರು' ಎಂದು ಬಿಜಾಪುರದ ಎಸ್‌ಪಿ ತಿಳಿಸಿದ್ದಾರೆ.

ಮೃತ ಯೋಧನನ್ನು ಮಲ್ಲುರಾಮ್ ಸೂರ್ಯವಂಶಿ ಎಂದು ಗುರುತಿಸಲಾಗಿದ್ದು, ಛತ್ತೀಸಗಡ ಸಶಸ್ತ್ರ ಪಡೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎಂದು ತಿಳಿಸಿದ್ದಾರೆ.

ಈ ಹತ್ಯೆಯ ಹೊಣೆಯನ್ನು ಗಂಗಲೂರ್ ಪ್ರದೇಶ ಸಮಿತಿಯು ಹೊತ್ತುಕೊಂಡಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು