ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡ್ರ್ಯಾಗನ್‌ ಫ್ರೂಟ್‌‌ಗೆ 'ಕಮಲಂ' ಹೆಸರು: ಬಿಜೆಪಿ ವಿರುದ್ಧ ಹರಿಹಾಯ್ದ ಎನ್‌ಸಿಪಿ

Last Updated 20 ಜನವರಿ 2021, 14:15 IST
ಅಕ್ಷರ ಗಾತ್ರ

ಮುಂಬೈ: ಡ್ರ್ಯಾಗನ್‌ ಫ್ರೂಟ್‌‌ಗೆ 'ಕಮಲಂ' ಎಂಬ ಹೆಸರು ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಗುಜರಾತ್‌ ಸರ್ಕಾರದ ವಿರುದ್ಧ ಎನ್‌ಸಿಪಿ ಬುಧವಾರ ಹರಿಹಾಯ್ದಿದೆ.

'ಡ್ರ್ಯಾಗನ್‌ ಫ್ರೂಟ್‌‌ನ ಹೆಸರು ಬದಲಿಸಲು ರಾಜ್ಯ ಸರ್ಕಾರವು ನಿರ್ಧರಿಸಿದೆ. ಹಣ್ಣಿನ ಹೊರ ಪದರವು ಕಮಲವನ್ನು ಹೋಲುತ್ತದೆ, ಹಾಗಾಗಿ ಆ ಹಣ್ಣಿಗೆ ಕಮಲಂ ಎಂದು ಕರೆಯಲಾಗುತ್ತದೆ' ಎಂದು ಸಿಎಂ ವಿಜಯ್ ರುಪಾಣಿ ಹೇಳಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಎನ್‌ಸಿಪಿ ವಕ್ತಾರ ಮಹೇಶ್‌ ತಾಪ್ಸೆ, 'ಹಣ್ಣುಗಳನ್ನೂ ಸಹ ಬ್ರ್ಯಾಂಡ್‌ ಮಾಡಲು ಬಿಜೆಪಿಯವರು ಆರಂಭಿಸಿದ್ದಾರೆ. ಅವರು ಹಿಂದೂಸ್ತಾನವನ್ನು ಕಮಲಸ್ತಾನ ಎಂದು ಕರೆಯುವ ಸಮಯ ದೂರ ಉಳಿದಿಲ್ಲ. ಈ ಬಗ್ಗೆ ನಮಗೆ ಭಯವಿದೆ' ಎಂದು ವ್ಯಂಗ್ಯವಾಡಿದ್ದಾರೆ.

ಕಮಲವು ಬಿಜೆಪಿ ಪಕ್ಷ ಚಿಹ್ನೆಯಾಗಿದೆ. ದೇಶದಲ್ಲಿ ಗುಜರಾತ್‌, ಕೇರಳ, ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರ ಪ್ರದೇಶ, ಪಶ್ಚಿಮ ಬಂಗಾಳ, ಒಡಿಶಾ ಹಾಗೂ ಅಂಡಮಾನ್ ಮತ್ತು ನಿಕೊಬಾರ್‌ ದ್ವೀಪಗಳಲ್ಲಿ ಡ್ರ್ಯಾಗನ್ ಫ್ರೂಟ್‌‌ ಬೆಳೆಯಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT