ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಸ್ಲಿಮರ ಹತ್ಯೆಗೆ ನಿಮ್ಮ ಸಮ್ಮತಿ ಇದೆಯೇ: ಮ.ಪ್ರದೇಶ ಸಚಿವರಿಗೆ ಸ್ವರಾ ಪ್ರಶ್ನೆ

ಅಕ್ಷರ ಗಾತ್ರ

ಬೆಂಗಳೂರು: ಮಧ್ಯ ಪ್ರದೇಶದ ನೀಮುಚ್‌ ಜಿಲ್ಲೆಯ ರಾಮಪುರದಲ್ಲಿ ಮಾನಸಿಕ ಅಸ್ವಸ್ಥರಾದ ಹಿರಿಯ ನಾಗರಿಕರೊಬ್ಬರನ್ನು ಕಪಾಳಕ್ಕೆ ಹೊಡೆದು ಹತ್ಯೆ ಮಾಡಿದ ಘಟನೆಗೆ ಸಂಬಂಧಿಸಿ ಅಲ್ಲಿನ ಗೃಹ ಸಚಿವರ ಹೇಳಿಕೆಗೆ ನಟಿ ಸ್ವರಾ ಭಾಸ್ಕರ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಆತ ಮುಸ್ಲಿಮನಾಗಿದ್ದರೆ, ಆತನನ್ನು ಹತ್ಯೆ ಮಾಡುವುದಕ್ಕೆ ನಿಮ್ಮ ಸಮ್ಮತಿ ಇತ್ತೇ? ಎಂದು ಪ್ರಶ್ನಿಸಿದ್ದಾರೆ.

ನೀಮುಚ್‌ ಘಟನೆಗೆ ಸಂಬಂಧಿಸಿ ಗೃಹ ಸಚಿವ ನರೋತ್ತಮ್‌ ಮಿಶ್ರಾ ಅವರು, 'ಅವರಿಗೆ ವಯಸ್ಸಾಗಿತ್ತು. ಮಾನಸಿಕ ಅಸ್ವಸ್ಥರಾಗಿದ್ದರು. ತನ್ನನ್ನು ತಾನು ಪರಿಚಯಿಸಿಕೊಳ್ಳಲು ಶಕ್ತರಾಗಿರಲಿಲ್ಲ. ಅವರ ಕುಟುಂಬ ಸದಸ್ಯರು ಅವರ ಮಾನಸಿಕ ಸ್ಥಿತಿಯ ಬಗ್ಗೆ ಹೇಳಿದ್ದಾರೆ. ಆರೋಪಿಯನ್ನು ಗುರುತಿಸಲಾಗಿದೆ ಮತ್ತು ಐಪಿಸಿ ಸೆಕ್ಷನ್‌ 302, 304ರ ಅಡಿ ಪ್ರಕರಣ ದಾಖಲಿಸಲಾಗಿದೆ. ಮೃತನ ಕುಟುಂಬದ ಜೊತೆ ಸಂಪರ್ಕದಲ್ಲಿದ್ದೇವೆ' ಎಂದಿದ್ದರು.

ಈ ಕುರಿತು ಸುದ್ದಿಸಂಸ್ಥೆ 'ಎಎನ್‌ಐ' ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಸ್ವರಾ ಭಾಸ್ಕರ್‌, 'ಹಾಗಿದ್ದರೆ ಆತ ತನ್ನನ್ನು ತಾನು ಮುಸ್ಲಿಂ ಎಂದು ಪರಿಚಯಿಸಿಕೊಂಡಿದ್ದಿದ್ದರೆ, ಆತನನ್ನು ಹತ್ಯೆ ಮಾಡುವುದು ಓಕೆ ಎಂದಾಗುತ್ತಿತ್ತೇ? ಮಧ್ಯ ಪ್ರದೇಶದ ಗೃಹ ಸಚಿವರಿಂದ ಇದೆಂತಹ ಸಂದೇಶ ರವಾನೆಯಾಗಿದೆ? ಈ ಘಟನೆಯಲ್ಲಿ ಕಾನೂನನ್ನು ಸಂಪೂರ್ಣವಾಗಿ ಗಾಳಿಗೆ ತೂರಲಾಗಿದೆ' ಎಂದಿದ್ದಾರೆ.

ಆರೋಪಿ ದಿನೇಶ್‌ ಕುಶ್ವಾಹ, ಹಿರಿಯ ನಾಗರಿಕ ಭವಾರ್‌ಲಾಲ್‌ ಜೈನ್‌ ಅವರಿಗೆ 'ನೀನು ಮೊಹಮ್ಮದ್‌' ಎಂದು ಹೆಸರಿಸಿ, ಗುರುತಿನ ಆಧಾರ್‌ ಕಾರ್ಡ್‌ ತೋರಿಸಲು ಒತ್ತಾಯಿಸಿ ಪದೇ ಪದೇ ಕಪಾಳಮೋಕ್ಷ ಮಾಡಿದ್ದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು. ಘಟನೆ ಕುರಿತು ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT