ಗುರುವಾರ , ಜೂನ್ 17, 2021
21 °C

ದೆಹಲಿಯಲ್ಲಿ ಮನೆ ಬಾಗಿಲಿಗೆ ಮದ್ಯ ಡೆಲಿವರಿ ಸೇವೆ

ಪಿಟಿಐ Updated:

ಅಕ್ಷರ ಗಾತ್ರ : | |

Representative image. Credit: iStock Photo

ನವದೆಹಲಿ: ರಾಷ್ಟ್ರರಾಜಧಾನಿಯಲ್ಲಿ ಕೋವಿಡ್ ಸೋಂಕು ತೀವ್ರತೆ ಕಡಿಮೆಯಾಗುತ್ತಿದ್ದು, ಅಲ್ಲಿನ ನಿವಾಸಿಗಳಿಗೆ ಮನೆ ಬಾಗಿಲಿಗೆ ಮದ್ಯ ಸರಬರಾಜು ಮಾಡಲು ಸರ್ಕಾರ ಒಪ್ಪಿಗೆ ಸೂಚಿಸಿದೆ.

ದೆಹಲಿ ಅಬಕಾರಿ (ತಿದ್ದುಪಡಿ) ಕಾಯ್ದೆ, 2021 ಅನ್ನು ಪ್ರಕಟಿಸಲಾಗಿದ್ದು, ಅದರ ಪ್ರಕಾರ ಮದ್ಯ ಪೂರೈಕೆಗೆ ಅನುಮತಿ ಪಡೆದವರು ಗ್ರಾಹಕರಿಗೆ ಮನೆಗೇ ಮದ್ಯ ತಲುಪಿಸಬಹುದು.

ಗ್ರಾಹಕರು ಆ್ಯಪ್ ಅಥವಾ ವೆಬ್‌ಸೈಟ್ ಮೂಲಕ ಮದ್ಯ ಬುಕ್ ಮಾಡಬಹುದು.

ಅಲ್ಲದೆ, ಅನುಮತಿ ಪಡೆದ ಪೂರೈಕೆದಾರರು ಮನೆ ಮಾತ್ರವಲ್ಲದೆ, ಕ್ಲಬ್, ಬಾರ್ ಮತ್ತು ರೆಸ್ಟೋರೆಂಟ್, ಟೆರೇಸ್‌ಗಳಲ್ಲಿ ಕೂಡ ಮದ್ಯ ಹಂಚಲು ಅನುವು ಮಾಡಿಕೊಡುತ್ತದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು