ಶನಿವಾರ, ಏಪ್ರಿಲ್ 1, 2023
29 °C

ಎನ್‌ಜಿಟಿಗೂ ಸ್ವಯಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಳ್ಳಲು ಅಧಿಕಾರ: ಸುಪ್ರೀಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಸ್ವಯಂಪ್ರೇರಿತವಾಗಿ ದಾಖಲಿಸಿದ ಪ್ರಕರಣಗಳಲ್ಲಿ ಆದೇಶ ನೀಡುವ ಮೊದಲು ಉಭಯತ್ರರ ವಾದ ಆಲಿಸುವ ಅಧಿಕಾರ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗಿದೆ (ಎನ್‌ಜಿಟಿ) ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ನ್ಯಾಯಮೂರ್ತಿಗಳಾದ ಎ.ಎಂ.ಖಾನ್‌ವಿಲ್ಕರ್ ಮತ್ತು ಸಿ.ಟಿ.ರವಿಕುಮಾರ್ ಅವರಿದ್ದ ನ್ಯಾಯಪೀಠವು ಗುರುವಾರ ಪ್ರಕರಣವೊಂದರ ಸಂಬಂಧ ಅ. 7ರಂದು ನೀಡಿದ್ದ ಆದೇಶಕ್ಕೆ ಸಂಬಂಧಿಸಿದಂತೆ ಈ ಸ್ಪಷ್ಟನೆಯನ್ನು ನೀಡಿತು. 

ಪರಿಸರಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿ  ವಿಚಾರಣೆ ನಡೆಸುವ ಅಧಿಕಾರವಿದೆ. ಪರಿಸರ ರಕ್ಷಣೆಗೆ ಸಂಬಂಧಿಸಿದಂತೆ ಕಣ್ಗಾವಲು ಸಂಸ್ಥೆಯಾಗಿ ಕೆಲಸ ಮಾಡಬೇಕಾಗಿರುವ ಎನ್‌ಜಿಟಿಯು ದೂರುಗಳಿಗೆ ಕಾಯುತ್ತಾ ಕೂರಲಾಗದು ಎಂದು ಸುಪ್ರೀಂ ಕೋರ್ಟ್ ಹೇಳಿತು.

ಎನ್‌ಜಿಟಿಯು ಸ್ವಾಯತ್ತ ಸಂಸ್ಥೆಯಾಗಿದೆ. ಕೋರ್ಟ್‌ಗಳಂತೆ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಳ್ಳಲಾಗದು ಎಂಬ ವಾದವನ್ನು ತಳ್ಳಿಹಾಕಿತು. ದೂರು ಬರುವವರೆಗೂ ಮೌನಪ್ರೇಕ್ಷಕನಾಗಿ ಕೂರಲಾಗದು ಎಂದೂ ಹೇಳಿತು.

ಅ. 25ರಂದು ದ್ವಿಸದಸ್ಯರ ಪೀಠವು ಗ್ರೇಟರ್‌ ಮುಂಬೈನಗರಪಾಲಿಕೆಯ ಅರ್ಜಿ ಸೇರಿದಂತೆ ಹಲವು ಅರ್ಜಿಗಳನ್ನು ಎನ್‌ಜಿಟಿಗೆ ವರ್ಗಾಯಿಸಿತ್ತು. ಇವುಗಳನ್ನು ಹೊಸ ಅರ್ಜಿಗಳು ಎಂದು ಪರಿಗಣಿಸುವಂತೆಯೂ ಸೂಚನೆ ನೀಡಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು