ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈ ದಾಳಿ: ತಾಲಿಬಾನ್ ಜತೆ ನಂಟು ಹೊಂದಿದ ವ್ಯಕ್ತಿಯಿಂದ ಎನ್ಐಎಗೆ ಬೆದರಿಕೆ ಇಮೇಲ್

Last Updated 3 ಫೆಬ್ರುವರಿ 2023, 12:32 IST
ಅಕ್ಷರ ಗಾತ್ರ

ಮುಂಬೈ: ತಾಲಿಬಾನ್ ಜೊತೆ ನಂಟು ಹೊಂದಿರುವ ವ್ಯಕ್ತಿಯೊಬ್ಬ ಮುಂಬೈನಲ್ಲಿ ದಾಳಿ ನಡೆಸುವುದಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಗೆ ಇಮೇಲ್ ಕಳುಹಿಸಿದ್ದಾನೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ತನಿಖಾ ಸಂಸ್ಥೆಯ ಮುಂಬೈ ಕಚೇರಿಗೆ ಗುರುವಾರ ಬೆದರಿಕೆ ಮೇಲ್ ಬಂದಿದೆ. ನಗರ ಪೊಲೀಸರು ಮತ್ತು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳದವರು (ಎಟಿಎಸ್) ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಬೆದರಿಕೆ ಸಂದೇಶ ಕಳುಹಿಸಲು ಬಳಸಲಾದ ಇಮೇಲ್ ವಿಳಾಸ ‘ಸಿಐಎ’ ಎಂದಿದೆ.

ಇ ಮೇಲ್‌ ಕಳುಹಿಸಿದ ವ್ಯಕ್ತಿಯ ಐಪಿ (ಇಂಟರ್ನೆಟ್ ಪ್ರೊಟೋಕಾಲ್) ವಿಳಾಸವನ್ನು ಪಾಕಿಸ್ತಾನದಲ್ಲಿ ಪತ್ತೆಹಚ್ಚಲಾಗಿದೆ. ಕಳೆದ ತಿಂಗಳು ತನಿಖಾ ಸಂಸ್ಥೆಗೆ‌ ಇದೇ ರೀತಿಯ ಮೇಲ್ ಕಳುಹಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT