ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿಯಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್, ಇಂದು–ನಾಳೆ ನೈಟ್ ಕರ್ಫ್ಯೂ ಜಾರಿ

Last Updated 31 ಡಿಸೆಂಬರ್ 2020, 8:16 IST
ಅಕ್ಷರ ಗಾತ್ರ

ನವದೆಹಲಿ: ಕೋರೋನಾ ಹರಡುವಿಕೆ ಮತ್ತು ಬ್ರಿಟನ್ನಿನ ವೇಗವಾಗಿ ಹರಡುವ ರೂಪಾಂತರಿ ವೈರಾಣು ಆತಂಕವಿರುವ ಈ ಸಂದರ್ಭದಲ್ಲಿ ಹೊಸ ವರ್ಷಾಚರಣೆ ಸಂದರ್ಭ ಜನರು ಗುಂಪು ಸೇರುವುದನ್ನು ತಡೆಯುವ ದೃಷ್ಟಿಯಿಂದ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಅಲ್ಲಿನ ಸರ್ಕಾರ ಡಿಸೆಂಬರ್‌ 31 ರ ರಾತ್ರಿ 11 ಗಂಟೆಯಿಂದ ಜನವರಿ 1 ರ ಬೆಳಿಗ್ಗೆ 6 ಗಂಟೆವರೆಗೆ ನೈಟ್ ಕರ್ಫ್ಯೂ ಹೇರಿದೆ.

ಈ ಮಧ್ಯೆ,. ದೆಹಲಿ ಮುಖ್ಯ ಕಾರ್ಯದರ್ಶಿ ವಿಜಯ್ ದೇವ್ ನೀಡಿರುವ ಆದೇಶದ ಪ್ರಕಾರ, ಜನವರಿ 1ರ ರಾತ್ರಿ 11 ಗಂಟೆಯಿಂದ ಜನವರಿ 2ರ ಬೆಳಿಗ್ಗೆ 6 ಗಂಟೆವರೆಗೆ ನೈಟ್ ಕರ್ಫ್ಯೂ ಜಾರಿಯಲ್ಲಿರಲಿದೆ

ಕೋವಿಡ್ 19 ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಹೇರಲಾಗಿರುವ ನೈಟ್ ಕರ್ಫ್ಯೂ ಆದೇಶದ ಅನ್ವಯ ಐದು ಜನರಿಗಿಂತಲೂ ಹೆಚ್ಚು ಮಂದಿ ಕರ್ಫ್ಯೂ ಸಂದರ್ಭ ಸಾರ್ವಜನಕ ಸ್ಥಳಗ:ಳಲ್ಲಿ ಒಟ್ಟಿಗೆ ಸೇರುವಂತಿಲ್ಲ. ಕರ್ಫ್ಯೂ ಸಂದರ್ಭ ಅಂತರರಾಜ್ಯ ಜನರ ಪ್ರಯಾಣ, ಸರಕು ಸರಬರಾಜಿಗೆ ಯಾವುದೇ ತಡೆ ಇಲ್ಲ.

ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, ದೆಹಲಿಯಲ್ಲಿ ಇದುವರೆಗೆ 8 ಮಂದಿಗೆ ಬ್ರಿಟನ್ನಿನ ರೂಪಾಂತರಿ ಕೊರೋನಾ ವೈರಾಣುವಿನ ಸೋಂಕು ತಗುಲಿದೆ. ಅಧಿಕೃತ ಮಾಹಿತಿ ಪ್ರಕಾರ, 8 ಸೋಂಕಿತರ ಪೈಕಿ ಕಳೆದ ವಾರವೇ ಒಬ್ಬ ಮಹಿಳೆ ಆಂಧ್ರಪ್ರದೇಶಕ್ಕೆ ತೆರಳಿದ್ದಾರೆ. ುಳಿದ 7 ಮಂದಿ ಕ್ವಾರಂಟೈನ್‌ನಲ್ಲಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಬುಧವಾರ ದೆಹಲಿಯಲ್ಲಿ 677 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, 21 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 6.24 ಲಕ್ಷಕ್ಕೆ ಏರಿದ್ದು, ಮೃತಪಟ್ಟವರ ಸಂಖ್ಯೆ 10,523ಕ್ಕೆ ಜಿಗಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT