ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಶೀಲ್ಡ್‌ ಲಸಿಕೆಗೆ 9 ರಾಷ್ಟ್ರಗಳ ಗ್ರೀನ್‌ಪಾಸ್

Last Updated 1 ಜುಲೈ 2021, 18:55 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌–19 ತಡೆಯಕೋವಿಶೀಲ್ಡ್ ಲಸಿಕೆ ಹಾಕಿಸಿಕೊಂಡಿರುವವರಿಗೆ ಗ್ರೀನ್‌ಪಾಸ್ ನೀಡಲು ಐರೋಪ್ಯ ಒಕ್ಕೂಟದ ಒಂಬತ್ತು ರಾಷ್ಟ್ರಗಳು ಒಪ್ಪಿಗೆನೀಡಿವೆ.

ಕೋವಿಡ್‌ ಲಸಿಕೆ ಹಾಕಿಸಿಕೊಂಡಿರುವವರು ಐರೋಪ್ಯ ಒಕ್ಕೂಟದ ರಾಷ್ಟ್ರಗಳಿಗೆ ಪ್ರವೇಶಿಸಲು ಡಿಜಿಟಲ್ಕೋವಿಡ್‌ ಪ್ರಮಾಣಪತ್ರ ಅಥವಾ ಗ್ರೀನ್‌ಪಾಸ್ ನೀಡಲಾಗುತ್ತದೆ. ಕೋವಿಶೀಲ್ಡ್‌ ಹಾಕಿಸಿಕೊಂಡವರಿಗೆ ಗ್ರೀನ್‌ಪಾಸ್ ನೀಡಲು ಐರೋಪ್ಯ ಔ‍ಷಧೀಯ ಸಂಸ್ಥೆ ಒಪ್ಪಿಗೆ ನೀಡಿಲ್ಲ. ಆದರೆ ಸದಸ್ಯ ರಾಷ್ಟ್ರಗಳುಒಪ್ಪಿಗೆ ನೀಡಲು ಅವಕಾಶ ನೀಡಿತ್ತು. ಈ ಪ್ರಕಾರ ಒಂಬತ್ತು ದೇಶಗಳು ಈಗ ಒಪ್ಪಿಗೆ ನೀಡಿವೆ.

ಗ್ರೀನ್‌ಪಾಸ್ ಗುರುವಾರದಿಂದಲೇ ಅನ್ವಯವಾಗಲಿದೆ. ಆಸ್ಟ್ರಿಯಾ, ಜರ್ಮನಿ, ಸ್ಲೊವೇನಿಯಾ, ಗ್ರೀಸ್‌, ಐಸ್‌ಲ್ಯಾಂಡ್, ಐರ್ಲೆಂಡ್, ಸ್ಪೇನ್, ಸ್ವಿಡ್ಜರ್ಲೆಂಡ್ ಮತ್ತು ಈಸ್ಟೋನಿಯಾ ದೇಶಗಳು ಕೋವಿಶೀಲ್ಡ್ ಪಡೆದಿರುವ ಭಾರತೀಯರಿಗೆ ಗ್ರೀನ್‌ಪಾಸ್‌ ನೀಡಲು ಒಪ್ಪಿಗೆ ನೀಡಿವೆ.

‘ಭಾರತ ಸರ್ಕಾರವು ದೃಢೀಕರಿಸುವ ಯಾವ ಲಸಿಕೆಯನ್ನು ಪಡೆದುಕೊಂಡಿದ್ದರೂ, ಅವರು ನಮ್ಮ ದೇಶವನ್ನು ಪ್ರವೇಶಿಸಲು ಅನುಮತಿ ನೀಡುತ್ತೇವೆ’ ಎಂದು ಈಸ್ಟೋನಿಯಾಹೇಳಿದೆ.

‘ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆ ಹಾಕಿಸಿಕೊಂಡಿರುವ ಭಾರತೀಯರು ಯೂರೋಪ್‌ ಪ್ರವೇಶಿಸಲು ಮತ್ತು ಯೂರೋಪ್‌ನ ಎಲ್ಲಾ ರಾಷ್ಟ್ರಗಳನ್ನು ಪ್ರವೇಶಿಸಲು ಅನುಮತಿ ನೀಡಿ’ ಎಂದು ಭಾರತದ ವಿದೇಶಾಂಗ ಸಚಿವಾಲಯವು ಐರೋಪ್ಯ ಒಕ್ಕೂಟದ ಎಲ್ಲಾ ರಾಷ್ಟ್ರಗಳಿಗೆ ಮನವಿ ಮಾಡಿಕೊಂಡಿತ್ತು.

ಲಸಿಕೆ ಹಾಕಿಸಿಕೊಂಡವರು ಐರೋಪ್ಯ ದೇಶಗಳನ್ನು ಪ್ರವೇಶಿಸಲು ಅವಕಾಶವಿಲ್ಲ. ಇದನ್ನು ಮರುಪರಿಶೀಲಿಸಬೇಕು ಎಂದು ವಿದೇಶಾಂಗ ಸಚಿವ ಎಸ್‌.ಜೈಶಂಕರ್ ಅವರು ಜಿ7 ಶೃಂಗಸಭೆಯ ನಂತರ ಪ್ರಸ್ತಾಪಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT