ಭಾನುವಾರ, ಜನವರಿ 24, 2021
28 °C

ಎನ್‌ಐಟಿ ದುರ್ಗಾಪುರ್‌ದಿಂದ ಬಡ ವಿದ್ಯಾರ್ಥಿಗಳಿಗೆ ‌ನಿಧಿ ಸಂಗ್ರಹ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕೋಲ್ಕತ್ತ: ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಶಿಕ್ಷಣ ಪಡೆಯಲು ನೆರವಾಗಲು ನಿಧಿ ಸಂಗ್ರಹಿಸುವ ಕಾರ್ಯಕ್ಕೆ ಐಐಟಿ ದುರ್ಗಾಪುರ್ ಮುಂದಾಗಿದೆ.

ಈ ವರ್ಷ ಶಿಕ್ಷಣ ಕೋವಿಡ್‌ ಪರಿಸ್ಥಿತಿಯಿಂದಾಗಿ ಪೂರ್ಣವಾಗಿ ಆನ್‌ಲೈನ್‌ ಮೂಲಕವೇ ನಡೆಯಲಿದೆ. ಈ ಕುರಿತ ನಿರ್ಧಾರವನ್ನು ಶನಿವಾರ ತೆಗೆದುಕೊಳ್ಳಲಾಗಿದೆ ಎಂದು ಸಂಸ್ಥೆಯು ಹೇಳಿಕೆ ನೀಡಿದೆ.

ಅನೇಕ ವಿದ್ಯಾರ್ಥಿಗಳು ಆರ್ಥಿಕವಾಗಿ ಹಿಂದುಳಿದಿದ್ದು, ಲ್ಯಾಪ್‌ಟಾಪ್‌ ಅಥವಾ ಸ್ಮಾರ್ಟ್‌ಫೋನ್ ಖರೀದಿಸಲು ಶಕ್ತರಲ್ಲ. ಎನ್ಐಟಿ ದುರ್ಗಾಪುರ್ ಇಂಥ ಅಗತ್ಯ ವಿದ್ಯಾರ್ಥಿಗಳಿಗೆ ನೆರವಾಗಲು ಸಾಧ್ಯವಾದಷ್ಟು ಕ್ರಮವಹಿಸುತ್ತಿದೆ. ಶಿಕ್ಷಣ ಮುಂದುವರಿಸಲು ನೆರವಾಗುವಂತೆ ಶುಲ್ಕ ಭರಿಸುವ ಕುರಿತೂ ಚಿಂತನೆ ನಡೆದಿದೆ. ಕೋವಿಡ್‌ ಸ್ಥಿತಿಯಿಂದಾಗಿ ಇದು ಅಗತ್ಯ ಎಂದು ತಿಳಿಸಿದೆ.

‌ಸಂಸ್ಥೆಯು ಸದ್ಯ ನಿಧಿ ಸಂಗ್ರಹಿಸುತ್ತಿದೆ. ಹಿರಿಯ ವಿದ್ಯಾರ್ಥಿಗಳು ಈ ಉದ್ದೇಶಕ್ಕಾಗಿ ನೆರವಾಗಲು ಮುಂದೆ ಬರಬೇಕು. ಸಂಸ್ಥೆಗಳು ತಮ್ಮ ಸಾಮಾಜಿಕ ಹೊಣೆಗಾರಿಕೆ ನಿಧಿಯಿಂದಲೂ ನೆರರವಾಗಬಹುದು ಎಂದು ತಿಳಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು