ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಅಧಿಕಾರಕ್ಕೆ ಬರಲು ವಾಜಪೇಯಿ, ಅಡ್ವಾಣಿ ಶ್ರಮವೇ ಕಾರಣ: ನಿತಿನ್ ಗಡ್ಕರಿ

Last Updated 22 ಆಗಸ್ಟ್ 2022, 1:25 IST
ಅಕ್ಷರ ಗಾತ್ರ

ನಾಗ್ಪುರ: ಬಿಜೆಪಿ ಅಧಿಕಾರಕ್ಕೆ ಬರಲು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಬಿಜೆಪಿ ನಾಯಕರಾದ ಎಲ್‌.ಕೆ. ಅಡ್ವಾಣಿ ಹಾಗೂ ದೀನದಯಾಳ್ ಉಪಾಧ್ಯಾಯ ಅವರ ಶ್ರಮವೇ ಕಾರಣ ಎಂದು ಕೇಂದ್ರ ಹೆದ್ದಾರಿ ಮತ್ತು ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

11,000 ಶಿಕ್ಷಕರು ಮತ್ತು ಬುಡಕಟ್ಟು ಪ್ರದೇಶಗಳ ಶಾಲೆಗಳನ್ನೊಳಗೊಂಡ ‘ಲಕ್ಷ್ಮಣ ರಾವ್ ಮಕರ್ ಸ್ಮೃತಿ ಸಂಸ್ಥೆ’ಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 1980ರಲ್ಲಿ ಮುಂಬೈಯಲ್ಲಿ ನಡೆದ ಸಮಾವೇಶವೊಂದರಲ್ಲಿ ವಾಜಪೇಯಿ ಮಾಡಿದ್ದ ಭಾಷಣವನ್ನು ನೆನಪಿಸಿಕೊಂಡಿದ್ದಾರೆ.

‘ಮುಂದೊಂದು ದಿನ ಕತ್ತಲೆ ಮರೆಯಾಗಲಿದೆ. ಸೂರ್ಯ ಕಾಣಿಸಲಿದ್ದಾನೆ ಮತ್ತು ಕಮಲ (ಬಿಜೆಪಿಯ ಚುನಾವಣಾ ಚಿಹ್ನೆ) ಅರಳಲಿದೆ’ ಎಂಬುದಾಗಿ ವಾಜಪೇಯಿ ಹೇಳಿದ್ದರು ಎಂದು ಗಡ್ಕರಿ ನೆನಪಿಸಿಕೊಂಡಿದ್ದಾರೆ.

‘ನಾನು ಅಲ್ಲಿದ್ದೆ. ಆ ಭಾಷಣವನ್ನು ಕೇಳಿದ್ದ ಎಲ್ಲರೂ ಅಂಥದ್ದೊಂದು ದಿನ ಬರಲಿದೆ ಎಂದೇ ನಂಬಿದ್ದರು. ಅಟಲ್, ಅಡ್ವಾಣಿ, ದೀನದಯಾಳ್ ಉಪಾಧ್ಯಾಯ ಹಾಗೂ ಅನೇಕ ಕಾರ್ಯಕರ್ತರ ಶ್ರಮವೇ ಇಂದು ನಾವು ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ದೇಶದಲ್ಲಿ ಹಾಗೂ ಅನೇಕ ರಾಜ್ಯಗಳಲ್ಲಿ ಆಡಳಿತಕ್ಕೆ ಬರಲು ಕಾರಣ’ ಎಂದು ಗಡ್ಕರಿ ಹೇಳಿದ್ದಾರೆ.

ಕಳೆದ ವಾರ ಪ್ರಕಟಗೊಂಡಿದ್ದ ಬಿಜೆಪಿಯ ಕೇಂದ್ರ ಸಂಸದೀಯ ಮಂಡಳಿ ಹಾಗೂ ಕೇಂದ್ರ ಚುನಾವಣಾ ಸಮಿತಿಯಿಂದ ಗಡ್ಕರಿ ಅವರನ್ನು ಕೈಬಿಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT