ಭಾನುವಾರ, ಏಪ್ರಿಲ್ 11, 2021
20 °C

ಹರಿಯಾಣ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ

ಪಿಟಿಐ Updated:

ಅಕ್ಷರ ಗಾತ್ರ : | |

ಚಂಡಿಗಡ: ಹರಿಯಾಣದ ಎಂ.ಎಲ್‌.ಖಟ್ಟರ್‌ ನೇತೃತ್ವದ ಬಿಜೆಪಿ–ಜೆಜೆಪಿ ಮೈತ್ರಿಕೂಟ ಸರ್ಕಾರದ ವಿರುದ್ಧ ವಿರೋಧ ಪಕ್ಷ ಕಾಂಗ್ರೆಸ್ ಬುಧವಾರ ಅವಿಶ್ವಾಸ ನಿರ್ಣಯ ಮಂಡಿಸಿದೆ.

ವಿಧಾನಸಭೆಯಲ್ಲಿ ಪ್ರಶ್ನೋತ್ತರ ಅವಧಿ‌ ಮುಗಿದ ನಂತರ ಸ್ಪೀಕರ್ ಗ್ಯಾನ್‌ಚಂದ್‌ ಗುಪ್ತಾ ಅವರು ವಿರೋಧ ಪಕ್ಷದ ನಾಯಕ ಭೂಪಿಂದರ್‌ ಸಿಂಗ್ ಹೂಡಾ ಮಂಡಿಸಿದ ಅವಿಶ್ವಾಸ ನಿರ್ಣಯವನ್ನು ಸ್ವೀಕರಿಸಿದರು.

‘ನಾನು ವಿರೋಧ ಪಕ್ಷದ ನಾಯಕರು ಮತ್ತು ಇತರ 27 ಕಾಂಗ್ರೆಸ್ ಶಾಸಕರು ಮಂಡಿಸಿರುವ ಅವಿಶ್ವಾಸ ನಿರ್ಣಯವನ್ನು ಸ್ವೀಕರಿಸಿದ್ದೇನೆ‘ ಎಂದು ಸ್ಪೀಕರ್ ಹೇಳಿದರು. ಅವಿಶ್ವಾಸ ನಿರ್ಣಯದ ಮೇಲೆ ಎರಡು ಗಂಟೆಗಳ ಚರ್ಚೆಗೆ ಅವರು ಅವಕಾಶ ನೀಡಿದರು.

90 ಸದಸ್ಯ ಬಲದ ವಿಧಾನಸಭೆಯಲ್ಲಿ ಪ್ರಸ್ತುತ 88 ಸದಸ್ಯರಿದ್ದಾರೆ. ಇದರಲ್ಲಿ ಆಡಳಿತಾರೂಢ ಬಿಜೆಪಿಯ 40 ಸದಸ್ಯರು, ಜೆಜೆಪಿ 10 ಮತ್ತು ಕಾಂಗ್ರೆಸ್‌ನ 30 ಸದಸ್ಯರು ಸೇರಿದ್ದಾರೆ. ಏಳು ಮಂದಿ ಪಕ್ಷೇತರ ಶಾಸಕರಿದ್ದು, ಐವರು ಸರ್ಕಾರವನ್ನು ಬೆಂಬಲಿಸುತ್ತಿದ್ದಾರೆ. ಹರಿಯಾಣ ಲೋಖಿತ್ ಪಕ್ಷದ ಒಬ್ಬ ಸದಸ್ಯರೂ ಸರ್ಕಾರಕ್ಕೆ ಬೆಂಬಲ ಸೂಚಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು