ಶನಿವಾರ, ಜೂನ್ 25, 2022
25 °C

ಲಂಡನ್‌ನಲ್ಲಿ ಬಿಜೆಪಿ ವಿರುದ್ಧ ರಾಹುಲ್ ಟೀಕೆಗೆ ಮಧ್ಯಪ್ರದೇಶ ಸಿಎಂ ಆಕ್ರೋಶ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಭೋಪಾಲ್(ಪಿಟಿಐ): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ದೇಶದ ಹತಾಶೆಗೊಂಡ, ನಿರಾಶವಾದಿ, ವಿಫಲ ಹಾಗೂ ಭರವಸೆಯೇ ಇಲ್ಲದ ನಾಯಕ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಹೇಳಿದ್ದಾರೆ.

ರಾಹುಲ್ ಗಾಂಧಿ ಅವರ ಮಾತನ್ನು ದೇಶದಲ್ಲಿ ಯಾರೂ ಕೇಳಿಸಿಕೊಳ್ಳುತ್ತಿಲ್ಲ. ಹೀಗಾಗಿ ಅವರು ತಮ್ಮ ಹತಾಶೆಯನ್ನು ವಿದೇಶದಲ್ಲಿ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದ್ದಾರೆ. 

ಲಂಡನ್ ಸಮಾವೇಶದಲ್ಲಿ ರಾಹುಲ್‌ ಅವರು, ‘ದೇಶದಾದ್ಯಂತ ಬಿಜೆಪಿಯು ಸೀಮೆಎಣ್ಣೆ ಪಸರಿಸುತ್ತಿದೆ. ಒಂದು ಸಣ್ಣ ಕಿಡಿಯಷ್ಟೇ ಸಾಕು ಮತ್ತು ನಾವು ಅತಿದೊಡ್ಡ ಸಂಕಷ್ಟ ಸ್ಥಿತಿಯಲ್ಲಿದ್ದೇವೆ’ ಎಂದು ಹೇಳಿರುವುದಕ್ಕೆ ಶಿವರಾಜ್ ಸಿಂಗ್ ಅವರು ಅಸಮಾಧಾನ ವ್ಯಕ್ತಪಡಿಸಿದರು. 

‘ರಾಹುಲ್ ಅವರು ಯಶಸ್ವಿಯಾಗದ, ನಿರಾಶವಾದಿ ನಾಯಕ. ದೇಶಭಕ್ತ ನಾಯಕರು ಯಾರೂ ಸಹ ವಿದೇಶದ ನೆಲದಲ್ಲಿ ರಾಹುಲ್ ರೀತಿ ದೇಶ ವಿರೋಧಿ ಹೇಳಿಕೆಗಳನ್ನು ನೀಡುವುದಿಲ್ಲ. ದೇಶದಲ್ಲಿ ಅವರ ಮಾತನ್ನು ಯಾರೂ ಕೇಳುವುದಿಲ್ಲ. ಹೀಗಾಗಿ ಅವರು ತಮ್ಮ ಹತಾಶೆಯನ್ನು ವಿದೇಶದಲ್ಲಿ ತೋರಿಕೊಳ್ಳುತ್ತಿದ್ದಾರೆ.

ನಾವು ಎಂದಿಗೂ ಹೊರ ದೇಶದಲ್ಲಿ ದೇಶವನ್ನು ಟೀಕೆ ಮಾಡಿಲ್ಲ. ಆದರೆ, ಹತಾಶೆಯ ವ್ಯಕ್ತಿಯಿಂದ ಏನನ್ನು ನಿರೀಕ್ಷಿಸಲು ಸಾಧ್ಯ? ರಾಹುಲ್ ಗಾಂಧಿ ಅವರನ್ನು ಕಾಂಗ್ರೆಸ್ ರಾಷ್ಟ್ರಾಧ್ಯಕ್ಷರನ್ನಾಗಿ ಮಾಡಲು ಪ್ರಚಾರ ನಡೆಸುತ್ತಿದ್ದಾರೆ. ಇಂಥ ಪಕ್ಷವನ್ನು ದೇವರೇ ಕಾಪಾಡಬೇಕು’ ಎಂದು ವ್ಯಂಗ್ಯವಾಡಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು