ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಲ್ಯಾಬ್‌ ಸೃಷ್ಟಿ ಎನ್ನಲು ಪುರಾವೆ ಇಲ್ಲ: ಐಸಿಎಂಆರ್‌ ನಿವೃತ್ತ ವಿಜ್ಞಾನಿ

Last Updated 31 ಮೇ 2021, 1:51 IST
ಅಕ್ಷರ ಗಾತ್ರ

ನವದೆಹಲಿ: ಕೊರೊನಾ ವೈರಸ್‌ನ ಉಗಮಕ್ಕೆ ಸಂಬಂಧಿಸಿದ ವಾದಗಳನ್ನು ಪುಷ್ಠೀಕರಿಸಲು ಸೂಕ್ತ ಪುರಾವೆಗಳಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್‌) ನಿವೃತ್ತ ವಿಜ್ಞಾನಿ ಅಭಿಪ್ರಾಯಪಟ್ಟಿದ್ದಾರೆ.

'ಕೊರೊನಾ ವೈರಸ್‌ ಕೃತಕವಾಗಿ ಸೃಷ್ಟಿ ಮಾಡಲಾಗಿದ್ದೇ ಅಥವಾ ಪ್ರಾಣಿಗಳಿಂದ ತಗುಲಿದ ಸೋಂಕೇ ಎಂಬುದಕ್ಕೆ ನಿಖರ ಪುರಾವೆಗಳಿಲ್ಲ. ನಿರ್ಣಾಯಕವಾಗಿ ಏನನ್ನಾದರೂ ಹೇಳಲು ಪುರಾವೆಗಳಿಗಾಗಿ ನಾವು ಕಾಯಬೇಕಾಗಿದೆ,' ಎಂದು ಐಸಿಎಂಆರ್‌ನ ಸಾಂಕ್ರಾಮಿಕ ರೋಗಶಾಸ್ತ್ರ ವಿಭಾಗದ ನಿವೃತ್ತ ಮುಖ್ಯ ವಿಜ್ಞಾನಿಯಾದ ರಮಣ್‌ ಗಂಗಖೇಡ್ಕರ್ ಹೇಳಿದ್ದಾರೆ.

ವೈರಸ್‌ನ ಮೂಲ ಚೀನಾದ ವುಹಾನ್‌ ಪ್ರಯೋಗಾಲಯ ಎಂಬ ವಾದ ಸದ್ಯ ಮುನ್ನೆಲೆಗೆ ಬಂದಿದೆ. ಕೊರೊನಾ ಮೂಲ ಪತ್ತೆಗಾಗಿ ಅಮೆರಿಕ ಎರಡನೇ ಹಂತದ ತನಿಖೆಗೂ ಮುಂದಾಗಿದೆ.

ಅಮೆರಿಕದ ಈ ನಡೆಗೆ ಚೀನಾ ಆಕ್ರೋಶಗೊಂಡಿದೆ. 'ಅಮೆರಿಕವು ರಾಜಕೀಯ ಮಾಡುತ್ತಿದೆ ಮತ್ತು ಆಪಾದನೆ ಹೊರಿಸುತ್ತಿದೆ,' ಎಂದು ಚೀನಾ ವಿದೇಶಾಂಗ ಇಲಾಖೆಯು ಟೀಕಿಸಿದೆ. ಅಲ್ಲದೆ, ಕೊರೊನಾ ವೈರಸ್‌ನ ಮೂಲ ವುಹಾನ್‌ ನಗರದ ವೈರಾಣು ಲ್ಯಾಬ್‌ ಎಂಬ ವಾದಗಳನ್ನು ಚೀನಾ ನಿರಾಕರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT