ಮಂಗಳವಾರ, ಜನವರಿ 31, 2023
19 °C

ಉತ್ತರ ಕೊರಿಯಾದಿಂದ ಕರಾವಳಿ ಗಡಿ ಮೇಲೆ ಫಿರಂಗಿ ದಾಳಿ: ದಕ್ಷಿಣ ಕೊರಿಯಾ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸೋಲ್‌: ಉತ್ತರ ಕೊರಿಯಾವು ತನ್ನ ಕರಾವಳಿ ಗಡಿ ಮೇಲೆ ಸುಮಾರು 130 ಸುತ್ತು ಫಿರಂಗಿ ಹಾರಿಸಿರುವ ಶಂಕೆ ಇದೆ ಎಂದು ದಕ್ಷಿಣ ಕೊರಿಯಾ ಸೇನೆಯು ಸೋಮವಾರ ಆರೋಪಿಸಿದೆ. 

ತನ್ನ ಪಶ್ಚಿಮ ಮತ್ತು ಪೂರ್ವ ಕರಾವಳಿಯಲ್ಲಿ ಸೋಮವಾರ ಮಧ್ಯಾಹ್ನ ಉತ್ತರ ಕೊರಿಯಾ ಫಿರಂಗಿ ಪ್ರಯೋಗ ನಡೆಸಿದೆ. 2018ರ ಅಂತರ ಕೊರಿಯಾ ಒಪ್ಪಂದದಂತೆ ರಚಿಸಲಾಗಿರುವ ಬಫರ್‌ ವಲಯದಲ್ಲಿ ಈ ಶಸ್ತ್ರಗಳು ಬಿದ್ದಿವೆ. ದಕ್ಷಿಣ ಕೊರಿಯಾ ಕರಾವಳಿ ಒಳಗೆ ಶೆಲ್‌ಗಳು ಬಿದ್ದಿರುವ ಕುರಿತು ಸದ್ಯ ವರದಿಯಾಗಿಲ್ಲ ಎಂದು ದಕ್ಷಿಣ ಕೊರಿಯಾದ ಸೇನಾಧಿಕಾರಿ ತಿಳಿಸಿದ್ದಾರೆ.

ಈ ಕುರಿತು ಉತ್ತರ ಕೊರಿಯಾಕ್ಕೆ ಮೌಖಿಕವಾಗಿ ಎಚ್ಚರಿಕೆ ನೀಡಲಾಗಿದೆ. ಒಪ್ಪಂದಕ್ಕೆ ಬದ್ಧವಾಗಿರುವಂತೆ ಹೇಳಲಾಗಿದೆ. ದಕ್ಷಿಣ ಕೊರಿಯಾ ಮತ್ತು ಅಮೆರಿಕ ಜಂಟಿ ಸೇನಾಪಡೆಯು ಉತ್ತರ ಕೊರಿಯಾದ ಸೇನಾ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಸೇನಾಧಿಕಾರಿ ಹೇಳಿದ್ದಾರೆ. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು