ಮಂಗಳವಾರ, ಮೇ 18, 2021
30 °C
ರೈಲ್ವೆ ನಿಲ್ದಾಣ ಪ್ರವೇಶಿಸುವವರೂ ಮಾಸ್ಕ್ ಧರಿಸುವುದು ಕಡ್ಡಾಯ

ರೈಲು ನಿಲ್ದಾಣಗಳಲ್ಲಿ ಮಾಸ್ಕ್ ಧರಿಸದವರು, ಉಗುಳುವ ಪ್ರಯಾಣಿಕರಿಗೆ ₹500 ದಂಡ

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ರೈಲು ನಿಲ್ದಾಣದ ಆವರಣದಲ್ಲಿರುವವರು ಮತ್ತು ರೈಲುಗಳಲ್ಲಿ ಸಂಚರಿಸುವವರು ಮಾಸ್ಕ್ ಧರಿಸದಿದ್ದರೆ ₹500 ದಂಡ ವಿಧಿಸುವುದಾಗಿ ರೈಲ್ವೆ ಇಲಾಖೆ ಶನಿವಾರ ಎಚ್ಚರಿಸಿದೆ.

‘ಕೋವಿಡ್‌ 19‘ ಸೋಂಕು ಹರಡುವುದನ್ನು ನಿರ್ಬಂಧಿಸುವುದಕ್ಕಗಿ ಆರೋಗ್ಯ ಮತ್ತು ಕುಟುಂಬ ವ್ಯವಹಾರಗಳ ಸಚಿವಾಲಯ ಹೊರಡಿಸಿರುವ ‘ಕೋವಿಡ್ ನಿಯಂತ್ರಣ ಶಿಷ್ಟಾಚಾರ‘ದ ಪ್ರಕಾರ ರೈಲ್ವೆ ಇಲಾಖೆ ಈ ಕ್ರಮವನ್ನು ಕೈಗೊಂಡಿದೆ. 

‘ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಜಾರಿಗೆ ತಂದಿರುವ ಮಾರ್ಗಸೂಚಿಯಲ್ಲಿ ಮಾಸ್ಕ್‌ ಧರಿಸುವುದು ಕೂಡ ಒಂದು. ರೈಲಿನಲ್ಲಿ ಪ್ರಯಾಣಿಸುವವರು ಮತ್ತು ರೈಲ್ವೆ ನಿಲ್ದಾಣ ಪ್ರವೇಶಿಸುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕೆಂದು ಕೊರೊನಾ ನಿಯಂತ್ರಣ ಸಂಬಂಧ ಭಾರತೀಯ ರೈಲ್ವೆ ಇಲಾಖೆ 2020ರ ಮೇ 11ರಂದು ಜಾರಿಗೆ ತಂದಿರುವ ನಿಗದಿತ ಕಾರ್ಯವಿಧಾನದಲ್ಲಿ (ಸ್ಟಾಂಟರ್ಡ್‌ ಆಪರೇಟಿಂಗ್ ಪ್ರೊಸೀಜರ್ – ಎಸ್‌ಒಪಿ) ಉಲ್ಲೇಖಿಸಲಾಗಿದೆ‘ ಎಂದು ಹೊಸ ಆದೇಶದಲ್ಲೂ ತಿಳಿಸಲಾಗಿದೆ.

ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದ್ದು, ಅದನ್ನು ಉಲ್ಲಂಘಿಸಿದರೆ ಭಾರತೀಯ ರೈಲ್ವೆ (ರೈಲ್ವೆ ಆವರಣದ ಶುಚಿತ್ವಕ್ಕೆ ಧಕ್ಕೆ ತರುವ ಚಟುವಟಿಕೆಗಾಗಿ ವಿಧಿಸುವ ದಂಡ) ಕಾಯ್ದೆ 2012 ಅನ್ವಯ ದಂಡ ವಿಧಿಸಲಾಗುತ್ತದೆ. ಈ ಕಾಯ್ದೆಯ ಅಡಿಯಲ್ಲಿ ರೈಲು ಮತ್ತು ರೈಲ್ವೆ ಆವರಣದಲ್ಲಿ ಉಗುಳುವವರಿಗೂ ದಂಡ ವಿಧಿಸಲಾಗುತ್ತದೆ ಎಂದು ಇಲಾಖೆ ತಿಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು