ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಪತ್ತೆಗೆ ‘ವಾಸನೆ ಪರೀಕ್ಷಾ ವಿಧಾನ’

Last Updated 30 ಏಪ್ರಿಲ್ 2021, 21:45 IST
ಅಕ್ಷರ ಗಾತ್ರ

ನವದೆಹಲಿ: ವಾಸನೆ ಗುರುತಿಸಲಾಗದ ಸ್ಥಿತಿಗೆ ಕಾರಣವಾಗುವ ಕೋವಿಡ್–19ರಂತಹ ವಿವಿಧ ರೋಗಗಳನ್ನು ತ್ವರಿತವಾಗಿ ಪತ್ತೆ ಮಾಡಲು, ಮಾತ್ರೆ (ಕ್ಯಾಪ್ಸೂಲ್‌) ಆಧಾರಿತ ಹೊಸ ಪರೀಕ್ಷಾ ವಿಧಾನವು ಪರಿಣಾಮಕಾರಿಯಾಗಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಪಾರ್ಕಿನ್ಸನ್ಸ್‌ ಕಾಯಿಲೆ ಇರುವವರಲ್ಲಿ ಸುಲಭವಾಗಿ ಬಳಸಬಹುದಾದ ಈ ವಿಧಾನವು ಕೋವಿಡ್‌ ಪತ್ತೆಗೂ ಸಹಾಯಕವಾಗಬಹುದು ಎಂದು ರಾಯಲ್‌ ಸೊಸೈಟಿ ಇಂಟರ್‌ಫೇಸ್‌ ನಿಯತಕಾಲಿಕದಲ್ಲಿ ಪ್ರಕಟವಾಗಿರುವ ಲೇಖನದಲ್ಲಿ ಹೇಳಲಾಗಿದೆ.

ಪಾರ್ಕಿನ್ಸನ್ಸ್‌, ಅಲ್ಜೈರ್ಸ್‌ ಮುಂತಾಗಿ ನರಗಳಿಗೆ ಸಂಬಂಧಿಸಿದ ಕೆಲವು ರೋಗಗಳನ್ನು ಪತ್ತೆ ಮಾಡಲು ಈ ವಿಧಾನವು ಸಹಕಾರಿಯಾಗಬಲ್ಲದು. ಆದರೆ ದುಬಾರಿ ಮತ್ತು ಪರೀಕ್ಷೆಗೆ ಹೆಚ್ಚು ಕಾಲಾವಕಾಶ ಬೇಕಾಗುತ್ತದೆ ಎಂಬ ಕಾರಣಕ್ಕೆ ಇದನ್ನು ವ್ಯಾಪಕವಾಗಿ ಬಳಸಲಾಗುತ್ತಿಲ್ಲ ಎಂದು ಲಂಡನ್‌ನ ಕ್ವೀನ್‌ ಮೇರಿ ವಿ.ವಿ. ಸಂಶೋಧಕರು ಹೇಳಿದ್ದಾರೆ.

ಈ ಸಮಸ್ಯೆಯನ್ನು ಬಗೆಹರಿಸಲು ಸಂಶೋಧಕರ ತಂಡವು ಹೊಸ ‘ವಾಸನೆ ಪರೀಕ್ಷಾ ಕಿಟ್‌’ ಒಂದನ್ನು ಅಭಿವೃದ್ಧಿಪಡಿಸಿದೆ. ಟೇಪ್‌ ಒಂದರ ಎರಡು ಸ್ಟ್ರಿಪ್‌ಗಳಲ್ಲಿ ಪರಿಮಳಯುಕ್ತ ಎಣ್ಣೆಯನ್ನು ಹೊಂದಿರುವ ಎರಡು ಕ್ಯಾಪ್ಸೂಲ್‌ಗಳನ್ನು ಬಳಸುವ ಮೂಲಕ ಈ ಪರೀಕ್ಷೆ ನಡೆಸಲಾಗುತ್ತದೆ. ಈ ಸ್ಟ್ರಿಪ್‌ ಮತ್ತು ಬೆರಳಿನ ಮಧ್ಯೆ ಕ್ಯಾಪ್ಸೂಲನ್ನಿಟ್ಟು ಪುಡಿ ಮಾಡಲಾಗುವುದು. ಈ ಸಂದರ್ಭದಲ್ಲಿ ಕ್ಯಾಪ್ಸೂಲ್‌ ಒಳಗಿದ್ದ ಪರಿಮಳಯುಕ್ತ ಎಣ್ಣೆ ಹೊರಗೆ ಬರುತ್ತದೆ. ವ್ಯಕ್ತಿಯು ಈ ಪರಿಮಳವನ್ನು ಗ್ರಹಿಸುವ ಸಾಮರ್ಥ್ಯಕ್ಕೆ ಅನುಗುಣವಾಗಿ ಅಂಕಗಳನ್ನು ನೀಡಲಾಗುವುದು. ಒಂದುವೇಳೆ ವ್ಯಕ್ತಿಯು ವಾಸನೆ ಗ್ರಹಿಸುವ ಶಕ್ತಿಯನ್ನು ಕಳೆದುಕೊಳ್ಳುತ್ತಿದ್ದರೆ, ಫಲಿತಾಂಶದ ವಿವರವನ್ನು ವೈದ್ಯರಿಗೆ ಕಳುಹಿಸಬಹುದು.

ಕೋವಿಡ್‌ ಪರೀಕ್ಷೆಗೆ ಪ್ರಸಕ್ತ ಅನುಸರಿಸಲಾಗುತ್ತಿರುವ ಗಂಟಲು, ಮೂಗುದ್ರವ ಪರೀಕ್ಷಾ ವಿಧಾನಕ್ಕಿಂತ ಇದು ಸುಲಭವಾಗಿದೆ. ಮೂಗು ಹಾಗೂ ಗಂಟಲದ್ರವ ತೆಗೆಯುವ ವೇಳೆ ಮಕ್ಕಳು ಒತ್ತಡಕ್ಕೆ ಒಳಗಾಗುತ್ತಾರೆ. ಇಂಥವರ ಪರೀಕ್ಷೆಗೆ ಕ್ಯಾಪ್ಸೂಲ್‌ ವಿಧಾನವನ್ನು ಅನುಸರಿಸಬಹುದು. ಅದೂ ಅಲ್ಲದೆ ಮನೆಯಲ್ಲೇ ಇದ್ದುಕೊಂಡು, ಹೆಚ್ಚು ವೆಚ್ಚವಿಲ್ಲದೇ ಪರೀಕ್ಷೆಯನ್ನು ನಡೆಸಬಹುದು ಎಂದು ಸಂಶೋಧಕರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT