ಸೋಮವಾರ, ಜುಲೈ 4, 2022
25 °C

ಒಡಿಶಾದಲ್ಲಿ ಪತಿ ಸಹಗಮನ?; ದುಃಖದಲ್ಲಿ ಪತ್ನಿಯ ಚಿತೆಗೆ ಹಾರಿ ಪ್ರಾಣಬಿಟ್ಟ ವೃದ್ಧ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಭವಾನಿಪಟ್ನಾ (ಒಡಿಶಾ): ಪತ್ನಿಯನ್ನು ಕಳೆದುಕೊಂಡು ತೀವ್ರ ದುಃಖದಲ್ಲಿದ್ದ ವೃದ್ಧರೊಬ್ಬರು, ಪತ್ನಿಯ ಚಿತೆಗೆ ಹಾರಿ ಜೀವ ಕಳೆದುಕೊಂಡಿರುವ ಘಟನೆ ಕಾಲಹಂದಿ ಜಿಲ್ಲೆ ಗೋಲಮುಂಡ ತಾಲ್ಲೂಕಿನ ಸಿಯಾಲ್‌ಜೋಡಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.

ನೀಲಮಣಿ ಸಬರ್‌ (65) ಚಿತೆಗೆ ಹಾರಿದ ವ್ಯಕ್ತಿ. ಇವರು ತನ್ನ ಪತ್ನಿ ರಾಯಿಬರಿ (60) ಅವರ ಅಂತ್ಯಕ್ರಿಯೆ ವೇಳೆ ಚಿತೆಗೆ ಹಾರಿ ಪ್ರಾಣ ಬಿಟ್ಟಿದ್ದಾರೆ. ಇವರ ನಾಲ್ವರು ಪುತ್ರರು ಮತ್ತು ಸಂಬಂಧಿಕರು ಸಂಪ್ರದಾಯದಂತೆ ಸ್ನಾನಕ್ಕೆ ಹೋಗಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನೀಲಮಣಿ ಅವರು ಗ್ರಾಮ ಪಂಚಾಯಿತಿ ಸಮಿತಿಯ ಮಾಜಿ ಸದಸ್ಯರಾಗಿದ್ದರು. 

ಈ ಘಟನೆಯ ಬಗ್ಗೆ ಅವರ ಕುಟುಂಬದವರು ಮಾಹಿತಿ ನೀಡಿಲ್ಲ ಎಂದು ಕೆಗಾಂವ್‌ ಠಾಣೆಯ ಪ್ರಭಾರ ಇನ್‌ಸ್ಪೆಕ್ಟರ್ ದಮು ಪರಜ ತಿಳಿಸಿದ್ದು, ‘ಇತರ ಮೂಲಗಳಿಂದ ಈ ವಿಷಯ ಗಮನಕ್ಕೆ ಬಂದಿದ್ದು, ನಾನು ಸ್ಥಳಕ್ಕೆ ಭೇಟಿ ನೀಡಲಿದ್ದೇನೆ’ ಎಂದು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು