ಮಂಗಳವಾರ, ಜನವರಿ 25, 2022
24 °C

ಜವಾದ್ ಚಂಡಮಾರುತ ಪ್ರಭಾವ: ಒಡಿಶಾದಲ್ಲಿ ಭಾರಿ ಮಳೆ

ಪಿಟಿಐ Updated:

ಅಕ್ಷರ ಗಾತ್ರ : | |

ಭುವನೇಶ್ವರ: ‘ಜವಾದ್’ ಚಂಡಮಾರುತದ ಪ್ರಭಾವದಿಂದಾಗಿ ಒಡಿಶಾದ ಹಲವೆಡೆ ಭಾರಿ ಮಳೆಯಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚಂಡಮಾರುತವು ಕಳೆದ 6 ಗಂಟೆಗಳಲ್ಲಿ ಬಂಗಾಳ ಕೊಲ್ಲಿಯಲ್ಲಿ ಉತ್ತರ-ಈಶಾನ್ಯಕ್ಕೆ ಗಂಟೆಗೆ 20 ಕಿ.ಮೀ ವೇಗದಲ್ಲಿ ಚಲಿಸಿದೆ. ಗೋಪಾಲಪುರದಿಂದ 90 ಕಿ.ಮೀ, ಪುರಿಯಿಂದ 120 ಕಿ.ಮೀ, ಪರದೀಪ್‌ನಿಂದ 210 ಕಿ.ಮೀ. ದೂರದಲ್ಲಿ ಕೇಂದ್ರೀಕೃತವಾಗಿದೆ ಎಂದು ಭಾನುವಾರ ರಾತ್ರಿ 11.30ರ ಹವಾಮಾನ ವರದಿ ತಿಳಿಸಿದೆ.

ಗಾಂಜಮ್‌, ಖುದ್ರಾ, ಪುರಿ, ಖೇಂದ್ರಪರ, ಕೇಂದ್ರಪರಾ ಹಾಗೂ ಜಗತ್‌ಸಿಂಗ್‌ಪುರದಲ್ಲಿ ಭಾನುವಾರದಿಂದ ಭಾರಿ ಮಳೆಯಾಗುತ್ತಿದೆ.

ಕಾಳಿಕೋಟೆಯಲ್ಲಿ ದಾಖಲೆಯ 158 ಎಂ.ಎಂ. ಮಳೆಯಾಗಿದ್ದು, ನಯಾಗಡದಲ್ಲಿ 107.5 ಎಂ.ಎಂ.ಮಳೆಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು